ನ್ಯೂಸ್

ಸ್ಪಾ ಹೆಸರಿನಲ್ಲಿ ಮಾಂಸ ದಂಧೆ ಆರೋಪ

ಬೆಂಗಳೂರು: ಸ್ಪಾ ಹೆಸರಿನಲ್ಲಿ ಮಾಂಸ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.
ಸದಾಶಿವಾನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಪಾನಲ್ಲಿ ಈ ರೀತಿ ದಂಧೆ ನಡೆಯುತ್ತಿದೆ ಅಂತ ಮಹಿಳಾ ಎಎಸ್‌ಐ ಒಬ್ಬರು ಆರೋಪಿಸಿದ್ದಾರೆ.
ಸದಾಶಿವನಗರ ನಾರ ಎಂಬ ಸ್ಪಾಗೆ ಭೇಟಿ ನೀಡಿರುವ ಎಎಸ್‌ಐ ಈ ಆರೋಪ ಮಾಡಿದ್ದಾರೆ. ಶೌಚಗೃಹ ಬಳಸಲು ಸ್ಪಾಗೆ ಹೋಗಿದ್ದ ಎಎಸ್‌ಐ ಅಲ್ಲಿನ ಹೆಣ್ಣು ಮಕ್ಕಳನ್ನ ಮಾತನಾಡಿಸಿ ವಿಡಿಯೋ ಮಾಡಿದ್ದಾರೆ. ನಂತರ ಈ ಹೆಣ್ಣುಮಕ್ಕಳನ್ನ ರಕ್ಷಿಸಬೇಕು ಸಿದ್ದರಾಮಯ್ಯ ಅವರಿಗೆ ಈ ವಿಚಾರ ತಿಳಿಬೇಕು ಅಂತ ವಾಯ್ಸ ನೋಟ್ ಕೂಡ ಹಾಕಿದ್ದಾರೆ. ಈ ವಾಯ್ಸ ನೋಟ್ ವೈರಲ್ ಆಗಿದೆ.
ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಸಾಕಷ್ಟು ಅಕ್ರಮ ನಡೀತಿದೆ ಇದಕ್ಕೆ ಇಲ್ಲಿನ ಪೊಲೀಸ್ ಅಧಿಕಾರಿಗಳೇ ಕಾರಣ ಅಂತ ಶಶಿಕಲಾ ಆರೋಪಿಸಿದ್ದಾರೆ. ಇನ್ನೂ ಎಎಸ್‌ಐ ಯಾವೂದೇ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಸ್ಪಾ ಪರಿಶೀಲನೆ ನಡೆಸಿದ್ದಾರೆ ಎಂಬ ಆರೋಪ ಕೂಡ ಇದೆ. ಒಂದು ವೇಳೆ ಅಲ್ಲಿ ವೇಶ್ಯಾವಾಟಿಕ ನಡೆಯುತ್ತಿರುವುದು ಸತ್ಯಾವೇ ಆಗಿದ್ದರೆ ನಗರ ಪೊಲೀಸ್ ಆಯುಕ್ತರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಆರೋಪದ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ತನಿಖೆ ನಡೆಸುವಂತೆ ಸೂಚಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.