ಬೆಂಗಳೂರು: ಅತಿಕಡಿಮೆ ಜನಸಂಖ್ಯೆ ಹೊಂದಿರುವ ಹಳ್ಳಿಕಾರ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಲು ಸಿಎಂ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಆಶ್ವಾಸನೆ ನೀಡಿದ್ದಾರೆ.
ನಗರದ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ಕನ್ವೆಷನ್ ಸೆಂಟರ್ನಲ್ಲಿ ಆರ್.ಎಂ.ಆರ್. ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 2025-2026ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸಂವಿಧಾನದಲ್ಲಿ ಎಲ್ಲ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ದೊಡ್ಡ ಸಮುದಾಯಗಳ ಆರ್ಭಟದಿಂದ ಸಣ್ಣ ಸಮುದಾಯಗಳು ರ್ನಿಲಕ್ಷ$್ಯಕ್ಕೆ ಒಳಗಾಗಿದ್ದವು. ಚಿನ್ನಸ್ವಾಮಿ, ವೆಂಕಟಸ್ವಾಮಿ, ಕಾಂತರಾಜು ಆಯೋಗ ನೇಮಕ ಮಾಡಿ ರ್ನಿಲಕ್ಷಕ್ಕೆ ಒಳಗಾದ ಹಿಂದುಳಿದ ಸಣ್ಣ ಸಮುದಾಯ, ಪರಿಶಿಷ್ಟ ಜಾತಿ ವರ್ಗಗಳಿಗೆ ಸಹಾಯ ಮಾಡುವ ಕೆಲಸ ಸರ್ಕಾರ ಮಾಡಿದೆ. ಹಳ್ಳಿಕಾರ ಸಮುದಾಯವನ್ನು ಪವರ್ಗ 1 ಕ್ಕೆ ಸರ್ಕಾರ ಸೇರಿಸುವ ಬೇಡಿಕೆ ಬಂದಿದೆ. ಈ ಸಂಬಂಧ ಸಿಎಂ ಡಿ.ಕೆ. ಶಿವಕುಮಾರ್ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಉನ್ನತ ಹುದ್ದೆಗೇರಲು ಮುಂದಾಗಿ:
ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಟ್ರಸ್ಟ್ ಅಡಿಯಲ್ಲಿ ರಾಜ್ಯದ 10 ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಸಹಾಯಹಸ್ತ ಚಾಚಲಾಗುತ್ತಿದೆ. ವಿದ್ಯಾರ್ಥಿಗಳು ಈ ಸಹಾಯವನ್ನು ಪಡೆದು ಉನ್ನತ ಹುದ್ದೆಗೇರಲು ಮುಂದಾಗಬೇಕು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಚಿವರಾದ ಬಿ. ರಘುಮೂರ್ತಿ, ಎಚ್.ಸಿ. ಬಾಲಕೃಷ್ಣ, ಶಾಸಕ ಟಿ.ಬಿ. ಜಯಚಂದ್ರ, ಎಂಎಲ್ಸಿ ಪುಟ್ಟಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಉಪ ಮೇಯರ್ ಬಿ.ಎಸ್. ಪುಟ್ಟರಾಜು, ಬಿಬಿಎಂಪಿ ಮಾಜಿ ಸದಸ್ಯ ಟಿ. ದಾಸೇಗೌಡ, ಟ್ರಸ್ಟ್ನ ಪದಾಧಿಕಾರಿಗಳಾದ ಮಾರುತಿ, ಎನ್. ನಾರಾಯಣಮೂರ್ತಿ, ಶ್ರೀನಿವಾಸಮೂರ್ತಿ, ಮುಖಂಡರಾದ ಎಂ. ಶಿವಕುಮಾರ್, ಬಿ.ಆರ್. ವಾಸುದೇವ್, ಬಿ. ಮಲ್ಲಿಕಾರ್ಜುನ್, ಕೆ.ಎನ್. ಹರೀಶ್ ಉಪಸ್ಥಿತರಿದ್ದರು.
ಜಾತಿ ಗಣತಿ ವರದಿ ಮೇರೆಗೆ ರ್ನಿಲಕ್ಷಕ್ಕೆ ಒಳಗಾದ ಹಳ್ಳಿಕಾರ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಸರ್ಕಾರ ಕ್ರಮವಹಿಸಬೇಕು. - ಕೆ.ಎಂ. ನಾಗರಾಜ್, ಆರ್.ಎಂ.ಆರ್. ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷ