ನ್ಯೂಸ್

ನಾನು ಮತ್ತು ರಾಜ್​​ ಬಿ.ಶೆಟ್ಟಿ ಯಾವತ್ತೂ ಚಿತ್ರದ ಬಗ್ಗೆ ಮಾತೇ ಆಡುವುದಿಲ್ಲ: ನಟಿ ಚೈತ್ರಾ ಜೆ.ಆಚಾರ್

ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ಯುವ ನಟಿ ಚೈತ್ರಾ ಜೆ.ಆಚಾರ್​, ನಾನು ಮತ್ತು ರಾಜ್​​ ಬಿ.ಶೆಟ್ಟಿ ಯಾವತ್ತೂ ಸಿನಿಮಾ ಬಗ್ಗೆ ಮಾತನ್ನಾಡಿಲ್ಲ ಎಂದು ಹೇಳಿದ್ದಾರೆ.

"ರಾಜ್​​ ಬಿ.ಶೆಟ್ಟಿ ಮತ್ತು ನಾನು ಯಾವತ್ತೂ ಸಿನಿಮಾ ಕುರಿತಾಗಿ ಎಲ್ಲಿಯೂ ಸಂಭಾಷಣೆಯನ್ನು ಮಾಡುವುದಿಲ್ಲ. ಬಹಳ ಅಪರೂಪ ಆ ರೀತಿಯ ಮಾತುಕತೆಗಳು ನಮ್ಮಲ್ಲಿ ನಡೆಯುವುದು. ಅವರು ಚಿತ್ರದ ಬಗ್ಗೆ ಮಾತನಾಡಿದಾಗ ಬಹುಶಃ ನಾನು ಮಾತನಾಡಿದ್ದೇನೆ ಹೊರತು, ನಾನೇ ಸಿನಿಮಾ ಬಗ್ಗೆ ಕೇಳಿರುವುದು ಅಥವಾ ಹೇಳಿರುವುದು ತೀರ ಕಡಿಮೆಯೇ. ನನಗೆ ರಾಜ್​​ 5 ವರ್ಷದಿಂದ ಸ್ನೇಹಿತರು, ಈ ಮಧ್ಯೆ ಯಾವ ಸಂದರ್ಭದಲ್ಲಿಯೂ ಕೂಡ ನಾನು ಹೇಳಿದ್ದೇ ನೆನಪಿಲ್ಲ" ಎಂದು ಹೇಳಿದರು.

"ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾದಾಗ ಟೋಬಿ ಕಥೆಯನ್ನು ರಾಜ್​ ಬರೆಯಲು ಪ್ರಾರಂಭಿಸಿದ್ದರು. ಆಗ ಅವರು ನನಗೆ ಕರೆ ಮಾಡಿ".....ಮತ್ತಷ್ಟು ಕುತೂಹಲಕಾರಿ ವಿಷಯಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಮುಂದುವರಿಸಿದ್ದಾರೆ. ವೀಕ್ಷಿಸಲು ಲಿಂಕ್​ ಕ್ಲಿಕ್​ ಮಾಡಿ.