ನ್ಯೂಸ್

ಚುನಾವಣಾ ಅಕ್ರಮ: 452 ಕೋಟಿ ಮೊತ್ತದ ವಸ್ತು ಮುಟ್ಟುಗೋಲು

Bengaluru - Political - Vilas Melagiri

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಇದ್ದು, ಚುನಾವಣಾ ಆಯೋಗ ಚುನಾವಣಾ ಅಕ್ರಮಗಳ ಪತ್ತೆಗೆ ಚುರುಕಿನ ಕಾರ್ಯಾಚರಣೆ ನಡೆಸುತ್ತಿದೆ.

ಈವರೆಗೆ ಒಟ್ಟು 98.89 ಕೋಟಿ ರೂ. ನಗದು ಸೇರಿದಂತೆ ಒಟ್ಟು 452 ಕೋಟಿ ರೂ. ಮೊತ್ತದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ನೀತಿ ಸಂಹಿತೆ ಜಾರಿಯಾದಂದಿನಿಂದ ಶನಿವಾರದವರೆಗೆ 179.21 ಕೊಟಿ ರೂ. ಮೊತ್ತದ ಮದ್ಯ, 11.89 ಕೋಟಿ ಬೆಲೆಬಾಳುವ ಡ್ರಗ್ಸ್, 78.33 ಕೋಟಿ ರೂ. ಮೊತ್ತದ ಚಿನ್ನ, 1.18 ಕೋಟಿ ರೂ. ಮೌಲ್ಯದ ಬೆಳ್ಳಿ, 1.22 ಕೋಟಿ ರೂ. ಬೆಲೆಯ ವಜ್ರ, 9.53 ಕೋಟಿ ರೂ. ಮೊಬಲಗಿನ ಉಚಿತ

ಉಡುಗೊರೆ, 72.48 ಕೋಟಿ ಮೊತ್ತದ ಇತರೆ ವಸ್ತುಗಳನ್ನು ಜ್ತು ಮಾಡಲಾಗಿದೆ. ಜಾಗೃತದಳಗಳು ದಾಳಿ ನಡೆಸಿ 2,301 ಎ್ಐಆರ್ ದಾಖಲಿಸಿವೆ.