ಮಂಗಳೂರು: ನಗರದ ಹಲವು ಮಾಂಸದಂಗಡಿಗಳಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ, ಅಲ್ಲದೆ ಇತರ ಮಾಂಸಕ್ಕೆ ಗೋಮಾಂಸ ಮಿಶ್ರಣ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಅನ್ವಯ ಬುಧವಾರ ಮುಂಜಾನೆ ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ವಿವಿಧ ಮಾಂಸ ಮಾರಾಟ ಅಂಗಡಿಗಳಿಗೆ ದಾಳಿ ನಡೆಸಿ ಪರಿಶೀಲಿಸಿದರು.
ಪಾಲಿಕೆ ವ್ಯಾಪ್ತಿಯ ಉರ್ವಸ್ಟೋರ್, ಉರ್ವ ಮಾರ್ಕೆಟ್, ಕುದ್ರೋಳಿ ಕಸಾಯಿಖಾನೆ ಮುಂತಾದೆಡೆ ಮಾಂಸದ ಅಂಗಡಿಗಳನ್ನು ಪರಿಶೀಲಿಸಲಾಯಿತು. ಹಾಗೂ ಅಕ್ರಮವಾಗಿ ಮಾರಾಟ, ಕಂಡುಬಂದಲ್ಲಿ ಪರವಾನಿಗೆ ರದ್ದು ಮಾಡುವ ಎಚ್ಚರಿಕೆ ಈಗಾಗಲೇ ನೀಡಲಾಗಿದೆ.
ಈ ವೇಳೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಕಿರಣ್ ಕುಮಾರ್, ಮ.ನ.ಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಮ.ನ.ಪಾ ಅಧಿಕಾರಿಗಳ ವರ್ಗ ಉಪಸ್ಥಿತರಿದ್ದರು.