ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಯುವ ಜನಾಂಗವನ್ನು ಅಧಃಪತನಕ್ಕೆ ತಳ್ಳುವ, ಕೌಟುಂಬಿಕ ಜೀವನವನ್ನು ಹಾಳುಗೆಡಹುವ ಕುಡಿತ ಸಮಾಜಕ್ಕೆ ಮಾರಕವಾಗಿದೆ. ಈ ಶಿಬಿರದಿಂದ ಮದ್ಯವ್ಯಸನಿಗಳು ವ್ಯಸನದಿಂದ ಮುಕ್ತರಾಗಿ ಕೌಟುಂಬಿಕವಾಗಿ, ವೈಯಕ್ತಿಕವಾಗಿ ಆರೋಗ್ಯವಂತರಾಗಿರಿ ಎಂದು ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್ ಹೇಳಿದರು.
ಕಾಪು ತಾಲೂಕು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೆಜಮಾಡಿ ಶ್ರೀ ನಾರಾಯಣಗುರು ಬಿಲ್ಲವರ ಸಂಘದ ಸಭಾಂಗಣದಲ್ಲಿ ಆಯೋಜಿಸಿರುವ 1951ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತಹಸೀಲ್ದಾರ್ ಪ್ರತಿಭಾ ಆರ್.ಮಾತನಾಡಿ, ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ವ್ಯಸನಮುಕ್ತನಾಗುವ ವ್ಯಕ್ತಿಯು ನವಜೀವನಕ್ಕೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಇದೊಂದು ಬದುಕಿನ ಸದವಕಾಶವಾಗಿದೆ. ಮನಪರಿವರ್ತನೆಯಿಂದ ವ್ಯಸನ ಮುಕ್ತರಾಗಲು ಸಾಧ್ಯವಿದ್ದು. 1951ನೇ ಮದ್ಯ ವರ್ಜನ ಶಿಬಿರವು ಕರ್ನಾಟಕ ರಾಜ್ಯಕ್ಕೆ ದೊಡ್ಡ ಹೆಜ್ಜೆಯಾಗಿದೆ ಎಂದರು.
ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವರಾಮ ಎನ್.ಶೆಟ್ಟಿ, ಕಾಪು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ದಯಾನಂದ ಹೆಜಮಾಡಿ, ಉಡುಪಿ ಜಿಲ್ಲೆ ಜನಜಾಗೃತಿ ವೇದಿಕೆ ಸದಸ್ಯ ಉದಯ ಕುಮಾರ್ ಶೆಟ್ಟಿ ಇನ್ನಾ, ಕಟಪಾಡಿ ಜನಜಾಗೃತಿ ವೇದಿಕೆ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದದ ಅಧ್ಯಕ್ಷ ಎಸ್.ದಿವಾಕರ ಹೆಜಮಾಡಿ, ಜೈ ಕರ್ನಾಟಕ ಯುವಕ ಯುವತಿ ಮಂಡಳಿಯ ಪ್ರಬೋದ್‌ಚಂದ್ರ ಹೆಜಮಾಡಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುಧಾಕರ ಕರ್ಕೇರ, ಪಡುಬಿದ್ರಿ ವಲಯಾಧ್ಯಕ್ಷ ಭುಜಂಗ ಆಚಾರ್ಯ, ಹೆಜಮಾಡಿ ಒಕ್ಕೂಟಗಳ ಅಧ್ಯಕ್ಷರಾದ ಗಣೇಶ್ ಆಚಾರ್ಯ, ಆಶಾ ಪ್ರಾಣೇಶ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಗೌರವ ಸಲಹೆಗಾರ ಮೋಹನ್ ಸುವರ್ಣ, ಗೀತಾ ವಾಗ್ಳೆ, ಸುದರ್ಶನ್ ರಾವ್ ಕುಂಜಾರುಗಿರಿ ಉಪಸ್ಥಿತರಿದ್ದರು.
ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಸ್ವಾಗತಿಸಿದರು. ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರ್ವ ವಲಯ ಮೇಲ್ವಿಚಾರಕಿ ಗೀತಾ ಎನ್.ವಂದಿಸಿದರು. ಶಿಬಿರಾಧಿಕಾರಿ ವಿದ್ಯಾಧರ್ ನಿರೂಪಿಸಿದರು.