ಹಗರಿಬೊಮ್ಮನಹಳ್ಳಿ: ವಕೀಲರ ಜೀವಕ್ಕೆ ರಕ್ಷಣೆ ನೀಡಲು ಒತ್ತಾಯಿಸಿ ವಕೀಲರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಕೆಂಪು ಪಟ್ಟಿ ಧರಿಸಿ ಕಲಾಪದಲ್ಲಿ ಭಾಗವಹಿಸಿ, ಶಿರಸ್ತೇದಾರ ಶಿಲ್ಪಾಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ದಾಪುಗಾಲು
ಸಂಘದ ತಾಲೂಕು ಅಧ್ಯಕ್ಷ ಪಿ.ರಮೇಶ್ ಮಾತನಾಡಿ, ಹಿರಿಯ ವಕೀಲರಾದ ಸದಾಶಿವ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಿರುವುದು ಖಂಡನಾರ್ಹ. ಹಲ್ಲೆಮಾಡಿದವರು ಪ್ರಭಾವಿ ವ್ಯಕ್ತಿಗಳಾಗಿದ್ದರೂ ಕೂಡಲೆ ಅವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಕಕ್ಷಿದಾರರ ಪರವಾಗಿ ನಿಂತಾಗ ಅಪರಿಚಿತರು ಹಲ್ಲೆ ಮಾಡಿದರೆ ವಕೀಲರ ಜೀವಕ್ಕೆ ರಕ್ಷಣೆ ಎಲ್ಲಿದೆ. ಆದ್ದರಿಂದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಶ್ರೀನಿವಾಸ, ಉಪಾಧ್ಯಕ್ಷ ಮಹೇಶ್ವರ ಗೌಡ್ರು, ಪ್ರಮುಖರಾದ ಒ.ಎ.ಜಗದೀಶ, ಎಚ್.ಎಂ.ಸಂತೋಷ, ಹುಗ್ಗಣ್ಣನವರ ಪೃಥ್ವಿರಾಜ್, ಟಿ.ಜಿ.ಎಂ.ಕೊಟ್ರೇಶ, ಸಿ.ಬಸವರಾಜ, ಎಚ್.ಸತ್ಯನಾರಾಯಣ, ಆಂಜನೇಯ, ಟಿ.ಪ್ರಹ್ಲಾದ್, ಲಿಂಗನಗೌಡ್ರು, ಎಂ.ಯೋಗಾನಂದ, ಬಿ.ಬಸವರಾಜ, ಎನ್.ಗುರುಬಸವರಾಜ, ಸಿ.ಹುಲುಗಪ್ಪ, ಶಿವಕುಮಾರ, ವಿಶಾಲಾಕ್ಷಮ್ಮ, ವೀಣಾ ಹಿರೇಮಠ, ಭಾರತಿ ಇತರರಿದ್ದರು.