ಮಂಜುನಾಥ್ ಆರ್.ಗೌಡ 
ನ್ಯೂಸ್

ದೀಪಾವಳಿ ದೀವಟಿಗೆ ಉತ್ಸವ ಯಶಸ್ವಿಯಾಗಲಿ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಐತಿಹಾಸಿಕ ಹಿನ್ನೆಲೆ ಇರುವ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವ(ಪಂಚಿನ)ದ ಮೆರವಣಿಗೆಯು ಆ.20ರಿಂದ 22ರವರೆಗೆ ನಡೆಯಲಿದ್ದು, ಯಶಸ್ವಿಯಾಗಲಿ ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಆನಂದಗೆರೆ ಮಂಜುನಾಥ್ ಆರ್.ಗೌಡ ಹೇಳಿದರು.

ತಲತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಈ ಹಬ್ಬವು ಅರೆಮಲೆನಾಡು ಪ್ರದೇಶದ ವಿಶೇಷ ವೈಭವಾಗಿದೆ. ಬುಧವಾರ ಸಡಗರ ಸಂಭ್ರಮದಿಂದ ಶ್ರೀ ಸಿಡಿಲು ಮಲ್ಲಿಕಾರ್ಜುನ ದೀಪಾವಳಿ ದೀವಟಿಗೆ ಉತ್ಸವ(ಪಂಚಿನ) ಮೆರವಣಿಗೆ ಸಾಗಲಿದ್ದು, ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ವಿಶೇಷ ಜಾತ್ರೆಯು ಕೂಡ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕು. ಇನ್ನು ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಕೇಂದ್ರಬಿಂದು ಆಗಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಆಗಮಿಸುವಂತಹ ಭಕ್ತರು, ಪ್ರವಾಸಿಗರು ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ನೀಡಿರುವಂತೆ ಕಸ, ಪ್ಲಾಸ್ಟಿಕ್‌ಗಳನ್ನು ಸಂಗ್ರಹ ಬುಟ್ಟಿಯಲ್ಲಿ ಹಾಕಬೇಕು. ಪ್ಲಾಸ್ಟಿಕ್‌ಮುಕ್ತ ಹಬ್ಬವನ್ನಾಗಿ ಆಚರಣೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.