ಹೊಂಬುಜ ಜೈನ ಮಠದಲ್ಲಿ ಶ್ರೀ ಪದ್ಮಾವತಿ ದೇವಿಗೆ ನವಿಲು ಗರಿಗಳ ಅಲಂಕಾರ. 
ನ್ಯೂಸ್

ಸಂಸ್ಕಾರದ ಶಿಕ್ಷಣ ಪ್ರಾಪ್ತಿಯಾಗಲಿ

ರಿಪ್ಪನ್‌ಪೇಟೆ: ಶಾರದಾ ದೇವಿಯ ವಿಶೇಷ ಪೂಜೆಯು ನಾಡಿನ ಸಮಸ್ತರಿಗೆ ಸಂಸ್ಕಾರಯುತ ಶಿಕ್ಷಣ ದಯಪಾಲಿಸಿ ರಾಷ್ಟ್ರಸೇವೆಗೆ ಅಣಿಗೊಳಿಸಲಿ ಎಂದು ಹೊಂಬುಜ ಜೈನ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಹೊಂಬುಜ ಜೈನ ಮಠದ ನವರಾತ್ರಿ ಉತ್ಸವದ ಸೋಮವಾರ ಶ್ರೀ ಶಾರದಾ ದೇವಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಶ್ರೀ ಪದ್ಮಾವತಿ ದೇವಿಯನ್ನು ನೈಸರ್ಗಿಕ ಲ-ಪುಷ್ಟ, ನವಿಲುಗರಿಗಳಿಂದ ಸಿಂಗರಿಸುವುದು ಪ್ರಾಚೀನ ಪರಂಪರೆ. ವಿದ್ಯಾಧಿದೇವತೆಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿದರೆ ದೇವಿಯು ಸರ್ವರ ಬಾಳಿನಲ್ಲಿಯೂ ಜ್ಞಾನಾರ್ಜನೆ ಕರುಣಿಸುತ್ತಾಳೆ ಎಂದರು.

ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತರು ದ್ರವ್ಯ ಕಾಣಿಕೆ ಸಮರ್ಪಿಸಿ ಪೂಜೆಯಲ್ಲಿ ಭಾಗಿಯಾದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ನಾಗಸನ್ನಿಧಿಯಲ್ಲಿ ಪರಂಪರಾನುಗತ ಪೂಜಾ ವಿಧಿಗಳು ನೆರವೇರಿದವು.

ಸೇವಾಕರ್ತರಾದ ವೀಣಾ ಜೈನ್, ಮನಿಷ್ ನೇಹಾ ಜೈನ್, ಜ್ಞಾನವೀ ಜೈನ್, ಭಕ್ತರು, ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಪದ್ಮಾವತಿ ಮಹಿಳಾ ಸಮಾಜದ ಶ್ರಾವಕಿಯರು ಜಿನವಾಣಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.