ತ್ಯಾಗರ್ತಿ: ಮಾರಿಕಾಂಬಾ ಮತ್ತು ದುರ್ಗಾಂಬಾ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ಅಮೃತಮಯ ಆಗಬೇಕೆಂದು ಷಡಾದಾರ ಪ್ರತಿಷ್ಠಾಪನೆ ನೆರವೇರಿಸಲಾಗಿದೆ ಎಂದು ವಿದ್ವಾನ್ ಕೊಳಗಿಬೀಸ್ ಕುಮಾರ್ ಭಟ್ ಹೇಳಿದರು.
ನೂತನ ಮಾರಿಕಾಂಬಾ ಮತ್ತು ದುರ್ಗಾಂಬಾ ದೇವಾಲಯದಲ್ಲಿ ಪ್ರತಿಷ್ಠಾಪನಾ ಪೂರ್ವ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಾತನಾಡಿ, ಮಾರಿಕಾಂಬಾ ದೇವಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ದೀಪಸ್ತಂಭ, ದೇವರ ಅಡಿಯಲ್ಲಿ ಆಧಾರ ಶಿಲೆ, ನಿಧಿ ಕುಂಭ, ಕಮಲ, ಕೂರ್ಮ, ನಾಳಗಳಿಂದ ಸೇರಿದ ಆಧಾರವನ್ನು ಸಮಾನಾಂತರವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಇದರ ಪ್ರಯೋಜನವೇನೆಂದರೆ ದೇವಾಸುರರು ಮಂಥರ ಪರ್ವತವನ್ನು ಮಥನ ಮಾಡುವಾಗ ಅಮೃತ ದೊರೆಯುತ್ತದೆ. ಅದೇ ರೀತಿ ಇಲ್ಲಿಯೂ ದೇವತಾ ಕಾರ್ಯಗಳಿಂದ ಅಮೃತಮಯವಾಗಬೇಕು ಎಂದರು.
ದೇವಾಲಯ ಸಮಿತಿ ಪ್ರಮುಖರಾದ ಮೋಹನ, ಕೆ.ಬಿ.ಗಣಪತಿ, ಜೈ ಕುಮಾರ್, ಹರೀಶ್‌ಕುಮಾರ್, ಗೋಪಾಲಕೃಷ್ಣ, ಟಿ.ವಿ.ಶ್ರೀನಿವಾಸ್, ನಿಂಗಪ್ಪ, ನಾಗೇಂದ್ರ, ಪುಟ್ಟಸ್ವಾಮಿ, ಲಕ್ಷ್ಮೀಕಾಂತ, ಮಂಜುನಾಥ, ಶಿವಶಂಕರ್ ಇತರರಿದ್ದರು.