ಶಿವಮೊಗ್ಗ ಗಾಂಧಿ ಪಾರ್ಕ್ ಅಭಿವೃದ್ಧಿಗೆ ಒತ್ತಾಯಿಸಿ ಕರ್ನಾಟಕ ನಾಡು ರಕ್ಷಣಾ ವೇದಿಕೆಯ ಎಸ್.ಎಂ.ದಿನೇಶ್, ಪ್ರವೀಣ್, ಮಂಜುನಾಥ್, ಸಚಿನ್, ಮಹ್ಮದ್ ಗೌಸ್, ಶಶಾಂಕ್, ಸಮೀವುಲ್ಲಾ ಮುಂತಾದವರು ಪಾರ್ಕ್ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಗಾಂಧಿ ಪಾರ್ಕ್‌ಗೆ ಸಿಗಲಿ ಕಾಯಕಲ್ಪ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಗಾಂಧಿ ಪಾರ್ಕ್ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ನಾಡು ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಗಾಂಧಿ ಪಾರ್ಕ್ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಹೃದಯ ಭಾಗದಲ್ಲಿರುವ ಈ ಪಾರ್ಕ್‌ಗೆ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಅಭಿವೃದ್ಧಿ ಪಡಿಸಿದ್ದ ಉದ್ಯಾನವನ ಈಗ ಅವ್ಯವಸ್ಥೆಯ ಆಗರವಾಗಿದೆ ಎಂದು ದೂರಿದರು.

ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿವೆ. ಕಾರಂಜಿಗಳು ಹಾಳಾಗಿವೆ. ನೆಲಹಾಸು ಕಿತ್ತು ಹೋಗಿದೆ. ನೈರ್ಮಲ್ಯ ಕಾಣದಾಗಿದೆ. ಪುಟಾಣಿ ರೈಲು ಸರಿಯಾಗಿ ಸಂಚರಿಸುತ್ತಿಲ್ಲ. ನಿರ್ವಹಣೆ ಮಾಯಾವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪಾರ್ಕ್‌ಗೆ ಕಾಯಕಲ್ಪ ನೀಡಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಎಸ್.ಎಂ.ದಿನೇಶ್, ಸಂಕೇತ್, ದಾಮೋದರ್, ಪ್ರವೀಣ್, ಮಹ್ಮದ್ ಗೌಸ್, ಸಮೀವುಲ್ಲಾ, ಮಂಜುನಾಥ್, ಸಚಿನ್, ಶಿವರಾಜ್, ಗಗನ್ ಗೌಡ, ರಮೇಶ್, ಪ್ರದೀಪ್, ಶಶಾಂಕ್ ಇತರರಿದ್ದರು.