ನ್ಯೂಸ್

ಕೇರಳದಲ್ಲಿ ಲೀಟರ್ ನೀರಿಗೆ ಗರಿಷ್ಠ 13 ರೂ.

ತಿರುವನಂತಪುರ: ಒಂದು ಲೀಟರ್ ಖನಿಜಯುಕ್ತ ಕುಡಿಯುವ ನೀರಿನ ಬಾಟಲ್​ಗೆ ಗರಿಷ್ಠ -ಠಿ; 13 ಬೆಲೆ ನಿಗದಿ ಮಾಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಒಂದು ಲೀಟರ್ ನೀರಿ ಬಾಟಲ್​ಗೆ -ಠಿ; 20 ಇದೆ. ಕುಡಿಯುವ ನೀರಿನ ಗುಣಮಟ್ಟ ಭಾರತೀಯ ಮಾನಕ ಸಂಸ್ಥೆಗೆ (ಬಿಐಎಸ್) ಮಾನದಂಡಕ್ಕೆ ಅನುಗುಣವಾಗಿರ ಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ.

ಅವಶ್ಯಕ ವಸ್ತುವಾಗಿರುವ ನೀರು ಅಗ್ಗದ ದರದಲ್ಲಿ ದೊರೆಯಬೇಕು ಎಂಬ ನಿಟ್ಟಿನಲ್ಲಿ ಬಾಟಲ್ ನೀರು ತಯಾರಕರ ಜತೆ 2018ರಲ್ಲಿ ನಡೆದ ಸಭೆ ನಡೆಸಲಾಗಿತ್ತು. ಇದರ ಅನ್ವಯ ಬೆಲೆ ಇಳಿಕೆ ಮಾಡಿ ಆಹಾರ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಸಹಿ ಮಾಡಿದ್ದಾರೆ.