ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ ಅಧ್ಯಕ್ಷ ವಸಂತ್ ಹೋಬಳಿದಾರ್ ಮಾತನಾಡಿದರು.  
ನ್ಯೂಸ್

ವರ್ಷವಿಡೀ ಮಥುರಾ ಪ್ಯಾರಡೈಸ್ ರಜತೋತ್ಸವ

ಶಿವಮೊಗ್ಗ: ಮಥುರಾ ಪ್ಯಾರಡೈಸ್ ಮಾಲೀಕ ಎನ್.ಗೋಪಿನಾಥ್ ಅವರ ಮೇಲಿನ ಅಭಿಮಾನದಿಂದ ಶಿವಮೊಗ್ಗದ 50ಕ್ಕೂ ಅಧಿಕ ಸಂಘ ಸಂಸ್ಥೆಗಳು ವರ್ಷವಿಡೀ ಮಥುರಾ ಪ್ಯಾರಡೈಸ್ ರಜತೋತ್ಸವ ಹಮ್ಮಿಕೊಳ್ಳಲಿವೆ ಎಂದು ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ ಅಧ್ಯಕ್ಷ ವಸಂತ್ ಹೋಬಳಿದಾರ್ ಹೇಳಿದರು.

ಹೋಟೆಲ್‌ನ ರಜತ ಮಹೋತ್ಸವದ ಅಂಗವಾಗಿ 50ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ಸಿದ್ಧಪಡಿಸಲಾಗಿದೆ. ಎಲ್ಲ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಆಯಾ ಸಂಘಸಂಸ್ಥೆಯವರೇ ಭರಿಸುವವರು. ಇದೊಂದು ವಿಶೇಷ ರಜತೋತ್ಸವ ಕಾರ್ಯಕ್ರಮ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1999ರಲ್ಲಿ ಹೋಟೆಲ್ ಆರಂಭಗೊಂಡಿದ್ದು, ಮಾಲೀಕ ಗೋಪಿನಾಥ್ ಅವರು ವ್ಯಾಪಾರದ ಜತೆಯಲ್ಲಿ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ನಗರದ ವಿವಿಧ ಸಂಘಟನೆಗಳು ರಜತೋತ್ಸವಕ್ಕೆ ಕೈಜೋಡಿಸಲಿವೆ ಎಂದರು.
ಜು. 27ರಂದು ಸಂಜೆ 6ಕ್ಕೆ ಹೋಟೆಲ್‌ನ ರಜತೋತ್ಸವ ಸಭಾಂಗಣದಲ್ಲಿ ಸಂಭ್ರಮಾಚರಣೆಯನ್ನು ಬೃಹತ್ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಉದ್ಘಾಟಿಸುವರು. ಕಾರ್ಯದರ್ಶಿ ವೀರೇಂದ್ರ ಕಾಮತ್, ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಶಂಕರನಾರಾಯಣ ಹೊಳ್ಳ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ವಕೀಲ ಕೆ.ಪಿ.ಶ್ರೀಪಾಲ್, ಮಥುರಾ ಪ್ಯಾರಡೈಸ್ ಮಾಲೀಕ ಎನ್.ಗೋಪಿನಾಥ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷೆ ಶಾಂತಾ ಶೆಟ್ಟಿ, ಸಂಯೋಜಕ ಅ.ನಾ.ವಿಜಯೇಂದ್ರರಾವ್, ಖಜಾಂಚಿ ಅಚ್ಯುತ್ ರಾವ್, ನಿರ್ದೇಶಕ ಜಿ.ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.