ನ್ಯೂಸ್

9ಕ್ಕೆ ಸಾಮೂಹಿಕ ವಿವಾಹ, ಧರ್ಮಸಭೆ

Vijayapura - Desk - Shamarao Kulkarni

ಗೊಳಸಂಗಿ: ಮುತ್ತಗಿ ಸಂಸ್ಥಾನ ಹಿರೇಮಠದ ಲಿಂ. ರುದ್ರಮುನಿ ಶಿವಾಚಾರ್ಯರ 87ನೇ ಪುಣ್ಯಾರಾಧನೆ ಏ.6 ರಿಂದ 9 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರಾ ಮಹೋತ್ಸವದ ನಿಮಿತ್ತ ವಿಜಯಪುರ ಎಪಿಎಂಸಿ, ಸ್ಥಳಿಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಏ.6 ರಿಂದ 10 ರ ವರೆಗೆ ಜಾನುವಾರು ಜಾತ್ರೆ ನಡೆಯಲಿದೆ. ನಿತ್ಯ ರಾತ್ರಿ 10.30 ರಿಂದ ಭಜನೆ, ಗೀಗೀಪದ, ಡೊಳ್ಳಿನಪದ, ಬಯಲಾಟ ಪ್ರದರ್ಶನ ನಡೆಯಲಿದೆ. ಏ.8 ರಂದು ಬೆಳಗ್ಗೆ 9ಕ್ಕೆ ಅಯ್ಯಾಚಾರ, ಲಿಂಗದೀೆ ನಡೆಯಲಿದೆ.

ಏ.9 ರಂದು ಬೆಳಗ್ಗೆ 8ಕ್ಕೆೆ ಸಂಸ್ಥಾನ ಹಿರೇಮಠದ ವೀರ ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಲಿಂ. ರುದ್ರಮುನಿ ಶಿವಾಚಾರ್ಯರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವ, ಧರ್ಮಸಭೆ, ಸನ್ಮಾನ ಸಮಾರಂಭ, 9 ರಂದು ಬೆಳಗ್ಗೆ 10.30ಕ್ಕೆ ಪುರಾಣ ಮಂಗಲ, ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.