ಮಸ್ಕಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಖಲೀಲ್ ವೃತ್ತದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಮುಸ್ಲಿಂ ಮುಖಂಡ ಅಬ್ದುಲ್ ಗನಿಸಾಬ್ ಮಾತನಾಡಿ, ಉಗ್ರರ ದಮನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ದಿಟ್ಟ ಕ್ರಮ ಶ್ಲಾಘನೀಯ. ಭಾರತೀಯ ಸೇನೆ, ದೇಶ ರಕ್ಷಣೆಗೆ ಕಂಕಣ ಬದ್ಧವಾಗಿ ನಿಂತಿದೆ. ಸೈನಿಕರ ಮನೋಬಲ ಹೆಚ್ಚಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು. ಜಿಲಾನಿ ಖಾಜಿ, ಮಸೂದ್ ಪಾಷಾ ಮಾತನಾಡಿದರು.
ಮುಸ್ಲಿಂ ಪಂಚ್ ಕಮೀಟಿ ಅಧ್ಯಕ್ಷ ಅಬ್ದುಲ್ ಅಜೀಜ್, ಪ್ರಮುಖರಾದ ಶಬ್ಬೀರ್ ಚೌದ್ರಿ, ರಿಯಾಜ್ ಖಾಜಿ, ರಜಾಕ್ ಕರೋಡಗಿರಿ, ಅನೀಸ್ ಖಾಜಿ, ರಿಯಾಜ್ ಗುಜರಿ, ಗೌಸ್ ಪಿಡಿಬ್ಲ್ಯುಡಿ ಕ್ಯಾಂಪ್, ನಿಸಾರ ಬಳ್ಳಾರಿ, ಮಹ್ಮದ್ ಹುಸೇನ್ ಶೇಡ್ಮಿ ಇತರರಿದ್ದರು.