ನ್ಯೂಸ್

ಸಂತ ಅಂತೋಣಿ ಚರ್ಚ್‌ನಲ್ಲಿ ಮರಿಯಮ್ಮ ಜನ್ಮ ದಿನೋತ್ಸವ

ಸುಂಟಿಕೊಪ್ಪ: ರೋಮನ್ ಕ್ಯಾಥೋಲಿಕ್ ಕ್ರೆಸ್ತರು ಕನ್ಯಾಮಾತೆ ಮರಿಯಮ್ಮನವರ ಜನ್ಮ ದಿನೋತ್ಸವವನ್ನು ಸಂತ ಅಂತೋಣಿ ಚರ್ಚ್ ನಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಿದರು.

ಮಾತೆಯ ಜನ್ಮದಿನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಆಡಂಬರ ಬಲಿಪೂಜೆ ಹಾಗೂ ನೂತನ ಭತ್ತದ ತೆನೆಗಳನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ವಿತರಿಸಿದರು.

ದೇವಾಲಯದಿಂದ ಮಾತೆ ಮರಿಯಮ್ಮನವರ ಮೂರ್ತಿಯ್ನು ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ ಆವರಣಕ್ಕೆ ತೆಗೆದುಕೊಂಡು ಹೋಗಿ ಪುಷ್ಪನಮನ ಸಲ್ಲಿಸಲಾಯಿತು.

ಸೆ.8ರಂದು ಯೇಸುಕ್ರಿಸ್ತರ ತಾಯಿ ಮೇರಿ ಮಾತೆ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಪೆಸ್ತ್) ಪೂರ್ವಭಾವಿಯಾಗಿ ನಡೆಯುವ 9 ದಿನಗಳ ದಿವ್ಯ ಬಲಿಪೂಜೆ, ಪ್ರಭೋದನೆ ಹಾಗೂ ನೊವೇನಾ ಪ್ರಾರ್ಥನೆ ಪುಷ್ಪಾನಮನಗಳನ್ನು ಸಲ್ಲಿಸಲಾಯಿತು.

ನೊವೇನಾ ಪ್ರಾರ್ಥನೆ ಸಂದರ್ಭ ಕನ್ಯಾಮಾತೆ ಮರಿಯಮ್ಮ ಅವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಯಿತು.

ಮನೆ ಮನೆಗಳಲ್ಲಿ ನೂತನವಾಗಿ ನೀಡಲಾದ ಭತ್ತದ ತೆನೆಗಳಿಂದ ತಯಾರಿಸುವ ಭೋಜನ ಸೇವಿಸಲಾಯಿತು.