‘ವಿಜಯಾನಂದ’ ಚಿತ್ರದಲ್ಲಿ ತಮ್ಮ ತಂದೆಯ ಪಾತ್ರವನ್ನು ಹಿರಿಯ ನಟ ಅನಂತ್ ನಾಗ್ ಅವರು ಮಾಡಬೇಕು ಎಂದು ಡಾ. ವಿಜಯ ಸಂಕೇಶ್ವರ ಬಯಸಿದ್ದರಂತೆ. ಅವರ ಒತ್ತಾಸೆಯಾಗಿ, ಅನಂತ್ ನಾಗ್ ಸಹ ಆ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಚಿತ್ರ ನೋಡಿದವರೆಲ್ಲರೂ, ಕನ್ನಡ ಚಿತ್ರರಂಗದಲ್ಲಿ ಆ ಪಾತ್ರ ಮಾಡುವುದಕ್ಕೆ ಅನಂತ್ ನಾಗ್ ಅವರಿಗಿಂತ ಇನ್ನೊಬ್ಬ ಸಮರ್ಥ ನಟರಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನಂತ್ ನಾಗ್ ಅವರು ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಒಬ್ಬ ಶಿಸ್ತುಬದ್ಧ, ಆದರ್ಶಮಯ ತಂದೆಯಾಗಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಚ್ಚೆ ಪಂಚೆ, ಕೋಟು, ತಲೆಗೊಂದು ಪೇಟದಲ್ಲಿ ಕಾಣಿಸಿಕೊಂಡಿರುವ ಅನಂತ್ ನಾಗ್ ಅವರ ವಿನಯ, ಹಾವಭಾವ, ಮಾತಿನ ಶೈಲಿ, ನಿಷ್ಠುರತೆಯಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಪ್ರತಿಯೊಬ್ಬ ತಂದೆಯೂ ಹಾಗೆಯೇ ಇರಬೇಕು ಎಂದು ಎಲ್ಲರೂ ಬಯಸುವಷ್ಟು ಅದ್ಭುತವಾಗಿ ಹಿಡಿದಿಟ್ಟಿದ್ದಾರೆ.
ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಕನಸುಗಳಿರ ಬೇಕು ಮತ್ತು ಅದನ್ನು ಬೆನ್ನತ್ತಿ ಗುರಿ ಮುಟ್ಟಲು ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನು ‘ವಿಜಯಾನಂದ’ ಸಿನಿಮಾದಿಂದ ತಿಳಿಯುವುದು ಬಹಳಷ್ಟಿದೆ. | ವಿನಯ್ ಕುಮಾರ್ ಪ್ರೇಕ್ಷಕ ಶ್ರಮವಹಿಸಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರು ಮತ್ತು ನವೋದ್ಯಮ ಆರಂಭಿಸಿ ಉದ್ಯಮ ನಡೆಸಲು ಕಷ್ಟಪಡುತ್ತಿರು ವವರು ಸ್ಪೂರ್ತಿ ಪಡೆಯಲು ‘ವಿಜಯಾನಂದ’ ಸಿನಿಮಾ ನೋಡಲೇಬೇಕು. ದಕ್ಷಿಣ ಭಾರತದಲ್ಲೂ ಕೂಡ ಉತ್ತಮ ಸಾಧಕರಿದ್ದಾರೆ ಎಂಬುದನ್ನು ಸಿನಿಮಾ ಮೂಲಕ ನೋಡಬಹುದು. | ವಿನಯ್ ರಾಮ್ ಪ್ರೇಕ್ಷಕ ಕನ್ನಡಿಗರ ಬಯೊಪಿಕ್ ಆಗಿರುವುದರಿಂದ ಈ ಸಿನಿಮಾ ಮತ್ತು ಕಥೆ ಹೃದಯಕ್ಕೆ ಸಮೀಪ ಎನಿಸುತ್ತದೆ. ಯಾವುದೇ ಕ್ಷೇತ್ರವಾಗಿರಲಿ ಛಲ ಬಿಡದೆ ಕಾಯಕ ಮಾಡುತ್ತಿರುವ ಪ್ರತಿಯೊಬ್ಬರೂ ಸಿನಿಮಾ ನೋಡಬೇಕು. ಏಕೆಂದರೆ, ಈ ಸಿನಿಮಾ ಖಂಡಿತವಾಗಿಯೂ ಮತ್ತೊಬ್ಬರಿಗೆ ಪ್ರೇರಣೆ ನೀಡುತ್ತದೆ. | ಗಣೇಶ್ ಪ್ರೇಕ್ಷಕ ವಿಜಯ ಸಂಕೇಶ್ವರ ಅವರ ಬಗ್ಗೆ ಅಲ್ಲಲ್ಲಿ ಕೇಳಿ ಒಂದಿಷ್ಟು ಮಾಹಿತಿ ಪಡೆದು ಕೊಂಡಿದ್ದೆವು. ಆದರೆ, ಪೂರ್ಣವಾಗಿ ತಿಳಿಯಲು ಸಾಧ್ಯವಾಗಿರಲಿಲ್ಲ. ಈ ಸಿನಿಮಾದ ಮೂಲಕ ಅವರ ಸಾಧನೆ ಏನು ಎಂಬುದನ್ನು ಪೂರ್ಣಪ್ರಮಾಣದಲ್ಲಿ ತಿಳಿಯಲು ಸಾಧ್ಯವಾಯಿತು. ಉತ್ತರ ಕರ್ನಾಟಕದ ಮಂದಿಗೆ ಸಂಕೇಶ್ವರ ಹೆಮ್ಮೆಯ ಸಂಗತಿ. ಅನಂತ್ನಾಗ್ ಪಾತ್ರ ನಿಜಕ್ಕೂ ಅದ್ಭುತ. | ಸಂತೋಷ್ ಗಲಗಲಿ ಪ್ರೇಕ್ಷಕ ಎಲ್ಲ ವರ್ಗದ ಜನರಿಗೆ ಸ್ಪೂರ್ತಿ ನೀಡುವ ಸಿನಿಮಾ ‘ವಿಜಯಾನಂದ’. ಹೊಸದಾಗಿ ಸಾಧನೆ ಮಾಡಲು ಮುನ್ನುಗ್ಗುವವರಿಗೆ ಯಾರಾದರೊಬ್ಬರು ಬೆನ್ನು ತಟ್ಟಿ ಪ್ರೋತ್ಸಾಹ ನೀಡುವವರು ಇರಬೇಕು. ಸಿನಿಮಾದಲ್ಲಿ ರವಿಚಂದ್ರನ್ ಅವರು ಸಹಾಯ ಮಾಡುವ ವ್ಯಕ್ತಿಯಾಗಿ ಯುವಕರಿಗೆ ಬೆನ್ನು ತಟ್ಟಿದ್ದಾರೆ. ಕನ್ನಡದ ಬಯೋಪಿಕ್ ಅನ್ನು ನೋಡಲು ಖುಷಿಯಾಗುತ್ತದೆ. | ಕೃತಿಕಾ ಪ್ರೇಕ್ಷಕಿ ಈ ಬಯೋಪಿಕ್ ಎಷ್ಟು ಚೆನ್ನಾಗಿದೆ ಅಂದರೆ, ವಿಜಯ ಸಂಕೇಶ್ವರ ಅವರಿಗೆ ಹ್ಯಾಟ್ಸ್ ಆಫ್ ಮತ್ತು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇಂತಹ ಒಂದು ಸಿನಿಮಾ ಕೊಟ್ಟು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಫ್ಯಾಮಿಲಿ ಓರಿಯಂಟೆಡ್ ಸಿನಿಮಾ. ಏನಾದರೂ ಸಾಧಿಸಬೇಕು ಅಂತಿರೋರು ಈ ಸಿನಿಮಾನ ನೋಡಿ. ನೋಡುವವರ ಮನೆ, ಮನಗಳಲ್ಲಿ ‘ವಿಜಯಾನಂದ’ ಅಚ್ಚಳಿಯದೇ ಉಳಿಯುತ್ತದೆ. ನಿರ್ದೇಶನ, ನಟನೆ ಎಲ್ಲವೂ ಅತ್ಯುತ್ತಮ ವಾಗಿದೆ. ಕಷ್ಟಪಟ್ಟರೆ ನಿಜವಾಗಲೂ ಸಾಧನೆ ಎಂಬ ಕಿರೀಟವನ್ನು ಧರಿಸಬಹುದು ಅನ್ನೋದಕ್ಕೆ ಈ ಸಿನಿಮಾನೇ ಸಾಕ್ಷಿ. ದಯವಿಟ್ಟು ಕನ್ನಡ ಚಿತ್ರಗಳನ್ನು ಥಿಯೇಟರ್ಗಳಿಗೇ ಬಂದು ನೋಡಿ, ಕನ್ನಡ ಸಿನಿಮಾಗಳನ್ನು ಬೆಳೆಸಿ. | ದೇವು ಪ್ರೇಕ್ಷಕ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಸಿನಿಮಾ ಮಾಡಿರುವುದು ನೋಡೋಕೆ ಖುಷಿ ಆಗತೈತಿ. ಪ್ರಕಾಶ್ ಬೆಳವಾಡಿ ಅವರ ಪಾತ್ರ ಭಾರಿ ಚಲೋ ಐತಿ. ಅನಂತನಾಗ್ ತಮ್ಮ ಅಭಿನಯದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಉತ್ತರ ಕರ್ನಾಟಕದ ಮಂದಿ ಪ್ರತಿಯೊಬ್ಬರೂ ಈ ಸಿನಿಮಾ ನೋಡಬೇಕು. ಕಿರಿಯರಿಂದ ಹಿರಿಯರ ವರೆಗೂ ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡಿ ಸ್ಪೂರ್ತಿ ಪಡೆಯಬೇಕು ಎಂದು ಈ ಮೂಲಕ ಮನವಿ ಮಾಡ್ತೇನೆ. ಇಂಥ ಚಿತ್ರಗಳು ಗೆಲ್ಲಬೇಕು. | ಪೂಜಾ ಹುಬ್ಬಳ್ಳಿ ಪ್ರೇಕ್ಷಕಿ