ನ್ಯೂಸ್

ದಕ್ಷಿಣ ಚೀನಾ ಸಮುದ್ರದಲ್ಲಿ ತಾಲೀಮು

ನವದೆಹಲಿ: ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ಜತೆ ಸಂಘರ್ಷ ನಡೆದ ಬಳಿಕ ಚೀನಾ ಸೇನೆ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಸಜೀವ ಗುಂಡುಗಳು, ಶಸ್ತ್ರಾಸ್ತ್ರಗಳನ್ನು ಬಳಸಿ ಯುದ್ಧಾಭ್ಯಾಸ ನಡೆಸಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ದಕ್ಷಿಣ ವಲಯದ ಮೂರು ಕಮಾಂಡ್​ಗಳನ್ನು ಇದಕ್ಕೆ ಬಳಸಿಕೊಳ್ಳಲಾಗಿತ್ತು. ಲಡಾಖ್ ಘರ್ಷಣೆ ಬಳಿಕ ವಿಶ್ವದ ಗಮನವನ್ನು ಬೇರೆಡೆ ಸೆಳೆಯುವುದು ಚೀನಾದ ಉದ್ದೇಶವಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಕರೊನಾ ಟೆಸ್ಟಿಂಗ್​ ಟಾರ್ಗೆಟ್​ ತಲುಪಲು ಈ ವೈದ್ಯ ಮಾಡಿದ್ದೇನು ಗೊತ್ತಾ? ಇದೊಂದು ಶಾಕಿಂಗ್​ ಘಟನೆ

ಗಡಿ ಬಿಕ್ಕಟ್ಟಿನ ಬಳಿಕ ಭಾರತ - ಚೀನಾ ಮಿಲಿಟರಿ ಹಂತದ ಮಾತುಕತೆ ನಡೆಯುತ್ತಿರುವಾಗಲೇ ಚೀನಾ ಸೇನೆ ಗಡಿಯಲ್ಲಿ ಚಟುವಟಿಕೆ ಹೆಚ್ಚಿಕೊಂಡಿತ್ತು. ಸೇನಾ ಜಮಾವಣೆಯನ್ನು ಮಾಡುತ್ತಿತ್ತು. ಶಾಂಘೈ ಸಹಕಾರ ಒಕ್ಕೂಟ ಶೃಂಗದಲ್ಲಿ ಭಾರತ ಹಾಗೂ ಚೀನಾ ವಿದೇಶಾಂಗ ಸಚಿವರು ಗಡಿಯಲ್ಲಿ ಸೇನೆ ಹಿಂತೆಗೆತ ಬಗ್ಗೆ ಚರ್ಚೆ ನಡೆಸಿದ್ದರೂ, ಲಡಾಖ್​ನಲ್ಲಿ ಚೀನಾ ಸೇನೆ ಸಂಪೂರ್ಣ ಸಜ್ಜಾಗಿದೆ. ಇದಕ್ಕೆ ಮೂರು ವಿವಿಧ ಕಮಾಂಡ್​ಗಳನ್ನು ಚೀನಾ ಬಳಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

3 ವಾರದಲ್ಲಿ 6 ಬೆಟ್ಟ ವಶ

ಪೂರ್ವ ಲಡಾಖ್​ನಲ್ಲಿ ಭಾರತೀಯ ಸೇನೆ ಕಳೆದ ಮೂರು ವಾರಗಳಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಬಳಿಯ 6 ಬೆಟ್ಟಗಳನ್ನು ವಶಪಡಿಸಿಕೊಂಡಿದೆ. ಆಗಸ್ಟ್ 29ರಿಂದ ಸೆಪ್ಟೆಂಬರ್ 2ನೇ ವಾರದ ನಡುವೆ ಭಾರತೀಯ ಸೇನೆ ಮಾಗರ್ ಬೆಟ್ಟ, ಗುರುಂಗ್ ಹಿಲ್, ರೆಚೆನ್ ಲಾ, ರೆಜಾಂಗ್ ಲಾ, ಮಖ್ಪರಿ ಸೇರಿ 6 ಪರ್ವತಗಳನ್ನು ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.