ನ್ಯೂಸ್

ವಿರಾಮ ತನಕ ಆದಿ ಪುರುಷ್ ನೋಡಿ ಪರಾರಿಯಾದ ನವವಿವಾಹಿತೆ: ಕೊನೆಗೆ ಪೊಲೀಸರ ಮುಂದೆ ಶಾಕಿಂಗ್ ಟ್ವಿಸ್ಟ್..

ಜೈಪುರ: ಇಂಟರ್ವಲ್ ತನಕ ಆದಿ ಪುರುಷ್ ಸಿನಿಮಾವನ್ನು ನೋಡಿ ನಂತರ ಪರ ಪುರುಷನೊಂದಿಗೆ ನವ ವಿವಾಹಿತೆ ಪರಾರಿಯಾಗಿರುವ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.

ಸಿಕರ್‌ ಗ್ರಾಮದ ಯುವಕ ಕನರಾಮ್​ ಎಂಬಾತ 7 ದಿನಗಳ ಹಿಂದೆ ಮದುವೆಯಾಗಿ ಹನಿಮೂನ್​ಗಾಗಿ ತನ್ನ ಪತ್ನಿಯೊಂದಿಗೆ ಜೈಪುರಕ್ಕೆ ಬಂದು ಹೋಟೆಲ್‌ನಲ್ಲಿ ರೂಮ್​​ವೊಂದನ್ನು ಬುಕ್ ಮಾಡಿ ಅಲ್ಲಯೇ ತಂಗಿದ್ದರು. ನಂತರ ಪಿಂಕ್ ಸ್ಕ್ವೇರ್ ಮಾಲ್​​ನಲ್ಲಿ ಪತ್ನಿ ಜೊತೆ ಸಿನಿಮಾ ನೋಡುವ ಪ್ಲಾನ್ ಮಾಡಿದ ಆತ ಮಧ್ಯಾಹ್ನ 12 ಗಂಟೆಯ ಆದಿ ಪುರುಷ್​​ ಚಿತ್ರವನ್ನು ನೋಡಲು ಜತೆಯಾಗಿ ತೆರಳಿದ್ದ.

1:30 ಆಸುಪಾಸಿನಲ್ಲಿ ಚಿತ್ರದಲ್ಲಿ ಮಧ್ಯಂತರ ಇದ್ದಾಗ, ಪತಿ ತನ್ನ ಹೆಂಡತಿಗೆ ಸ್ವಲ್ಪ ಆಹಾರ ಮತ್ತು ಪಾನೀಯವನ್ನು ತರಲು ಹೋಗಿದ್ದ. ಆಗ ಅವನ ಹೆಂಡತಿ ಅವನಿಗೆ ತಿಳಿಯದಂತೆ ಅವನ ಹಿಂದೆಯೇ ಹೊರನಡೆದಿದ್ದಾಳೆ. ಆದರೆ ಪತಿ ಹಿಂತಿರುಗಿ ಬಂದು ನೋಡಿದಾಗ ಪತ್ನಿ ಕಾಣದೇ ಇದ್ದಾಗ ಪತಿ ಬೆಚ್ಚಿಬಿದ್ದಿದ್ದು, ಅವಳ ಬಗ್ಗೆ ವಿಚಾರಿಸಿದ್ದಾನೆ. ಕೊನೆಗೆ ಪತ್ನಿಯನ್ನು ಕಾಣದೇ ಇದ್ದಾಗ ಹೆಂಡತಿಗೆ ಹಲವಾರು ಬಾರಿ ಕರೆ ಮಾಡಿದ್ದು, ಫೋನ್ ಸ್ವಿಚ್ ಆಫ್ ಬರುತ್ತಿತ್ತು.

ಕೊನೆಗೆ ಪತಿ ಪೊಲೀಸ್​ ಠಾಣೆಗೆ ಹೋಗಲು ಸಮೀಪದ ಬಸ್​ ಸ್ಟಾಪ್​ಗೆ ಬಂದಿದ್ದು, ಅಲ್ಲಿ ಹೆಂಡತಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದನ್ನು ನೋಡಿದ್ದಾನೆ. ತಕ್ಷಣವೇ ಪತಿ ಸಮೀಪದ ಪೊಲೀಸರಿಗೆ ಸಂಪೂರ್ಣ ವಿಷಯ ತಿಳಿಸಿ ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಪೊಲೀಸರ ಮುಂದೆ ಶಾಕಿಂಗ್ ಟ್ವಿಸ್ಟ್:

ಮತ್ತೊಂದೆಡೆ ಸಿನಿಮಾ ಹಾಲ್‌ನಿಂದ ಓಡಿಹೋದ ವಧು ಕೆಲವು ಗಂಟೆಗಳ ನಂತರ ಜೈಪುರದ ಶಹಪುರ ಪೊಲೀಸ್ ಠಾಣೆ ತಲುಪಿದ್ದಾಳೆ. ಅಲ್ಲಿ ತನಗೆ ಈ ಮದುವೆ ತನಗಿಷ್ಟವಿಲ್ಲ. ಹಾಗಾಗಿ ನಾನು ಸಮಯನೋಡಿ ಪರಾರಿಯಾಗಿದ್ದೇನೆ ಎಂದು ಹೇಳಿದ್ದಾಳೆ.

ಮನವೊಲಿಕೆಯಲ್ಲಿ ತೊಡಗಿದ ಕುಟುಂಬ:

ಮತ್ತೊಂದೆಡೆ ಸುದ್ದಿ ತಿಳಿದ ಎರಡೂ ಕುಟುಂಬದವರು ವಧುವಿನ ಮನವೊಲಿಸುವಲ್ಲಿ ನಿರತರಾಗಿದ್ದು, ಆಕೆ ಇದಕ್ಎ ಯಾವುದೇ ಪತಿಕ್ರಿಯೆನ್ನು ನೀಡಿಲ್ಲ. ಸದ್ಯ, ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.(ಏಜೆನ್ಸೀಸ್​)