ಬೆಂಗಳೂರು: ವಿವಾಹಿತ ವ್ಯಕ್ತಿ ಮತ್ತು ವಿವಾಹಿತ ಮಹಿಳೆ ಮನೆ ಬಿಟ್ಟು ಪರಾರಿಯಾಗಿರುವ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಇಲಿಯಾಜ್ ನಗರದ ವಾಸೀಂ ಮತ್ತು ಕುಮಾರಸ್ವಾಮಿ ಲೇಔಟ್‌ನ ದಿಲ್‌ಷಾದ್ ಪರಾರಿಯಾದವರು. ವಾಸೀಂ ಪತ್ನಿ ಸುಮೆಯಾ ಬಾನು ತನ್ನ ಪತಿಯನ್ನು ಹುಡುಕಿಕೊಡುವಂತೆ ದೂರು ನೀಡಿದರೆ, ನಯೀಮ್ ತನ್ನ ಪತ್ನಿ ದಿಲ್‌ಷಾದ್‌ಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಾಸೀಂ ಮತ್ತು ದಿಲ್‌ಷಾದ್ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಸೀಂ ಮತ್ತು ಸುಮೆಯಾ ಬಾನು ಏಳು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ಮಗುವಿದೆ. ನಯೀಮ್ ಮತ್ತು ದಿಲ್‌ಷಾದ್ ೧೮ ವರ್ಷದ ಹಿಂದೆ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳಿವೆ. ಇತ್ತೀಚೆಗೆ ವಾಸೀಂ ಮತ್ತು ದಿಲ್‌ಷಾದ್ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಈ ಇಬ್ಬರು ಜೆ.ಪಿ.ನಗರದ ಲಾಡ್ಜ್‌ವೊಂದರಲ್ಲಿ ಏಕಾಂತದಲ್ಲಿ ಇರುವಾಗ ಸುಮಾಯಾ ಬಾನು ಕುಟುಂಬದವರಿಗೆ ಸಿಕ್ಕಿ ಬಿದ್ದು ದೊಡ್ಡ ಹೈಡ್ರಾಮವೇ ನಡೆದಿತ್ತು. ಈ ವೇಳೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು.
ಇದೀಗ ಕಳೆದ ೩-೪ ದಿನಗಳಿಂದ ವಾಸೀಂ ಮತ್ತು ದಿಲ್ ಷಾದ್ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಾಸೀಂ ಪತ್ನಿ ಸುಮೆಯಾ ಬಾನು ಮತ್ತು ನಯೀಮ್ ತನ್ನ ಪತ್ನಿ ದಿಲ್ ಷಾದ್‌ಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಈ ದೂರುಗಳನ್ನು ಆಧರಿಸಿ ಪೊಲೀಸರು ಇಬ್ಬರ ಪತ್ತೆಗೆ ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.