ನ್ಯೂಸ್

ಮಗು ತನ್ನದೇ ಅಂದುಕೊಂಡಿದ್ದ ಪತಿಗೆ ಡಿಎನ್​ಎ ಪರೀಕ್ಷೆ ಶಾಕ್: ವಿವಾಹಿತೆಯ ಬಲೆಯಲ್ಲಿ 13ರ ಬಾಲಕ

ಲಂಡನ್​: ನರ್ಸರಿ ಉದ್ಯೋಗಿಯಾಗಿರುವ ವಿವಾಹಿತೆಯೊಬ್ಬಳು 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಹೆಣ್ಣು ಮಗುವಿಗೆ ಜನ್ಮ ನೀಡಿದ ಆರೋಪದಲ್ಲಿ ಬಂಧನವಾಗಿ ವಿಚಾರಣೆಯನ್ನು ಎದುರಿಸುತ್ತಿದ್ದಾಳೆ.

ವಿಂಡ್ಸರ್​ ನಿವಾಸಿಯಾಗಿರುವ ಲಿಯಾ ಕೊರ್ಡೈಸ್​ (20) ಪಾನಮತ್ತಳಾಗಿ ಕಂಪ್ಯೂಟರ್​ ಗೇಮ್​ ಆಡುತ್ತಿದ್ದ ಬಾಲಕನ ಬೆಡ್​ರೂಮ್​ಗೆ ತೆರಳಿ ಆತನೊಂದಿಗೆ ಬಲವಂತಾಗಿ ಲೈಂಗಿಕ ಕ್ರಿಯೆ ನಡೆಸಿರುವ ಆರೋಪ ಎದುರಿಸುತ್ತಿದ್ದಾಳೆ.

ಯಾವುದೇ ರಕ್ಷಣಾ ಕ್ರಮಗಳನ್ನು ಅನುಸರಿಸದೇ ತಿಂಗಳಿಗೆ ಎರಡು ಬಾರಿಯಂತೆ ವರ್ಷಪೂರ್ತಿ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯು ಆಗಿದ್ದು, ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಾಳೆ ಎಂದು ಹೇಳಲಾಗಿದೆ.

ಪ್ರಾರಂಭದಲ್ಲಿ ಆರೋಪಿ ಲಿಯಾ ಕೊರ್ಡೈಸ್​ ಪತಿಯು ಮಗು ತನ್ನದೆಂದು ನಂಬಿದ್ದ. ಆದರೆ, ನಂತರದಲ್ಲಿ ನಡೆದ ಡಿಎನ್​ಎ ಪರೀಕ್ಷೆಯಿಂದ ಮಗು ಶಾಲಾ ಬಾಲಕನಿಗೆ ಹುಟ್ಟಿದ್ದು ಎಂದು ಕೋರ್ಟ್​ ವಿಚಾರಣೆ ವೇಳೆ ಬಹಿರಂಗವಾಗಿದೆ. ಬಾಲಕನೊಂದಿಗೆ ಲಿಯಾ ಕೊರ್ಡೈಸ್​ ರಹಸ್ಯವಾಗೇ ಲೈಂಗಿಕ ಸಂಬಂಧವನ್ನು ಹೊಂದಿದ್ದಳು ಎಂದು ತಿಳಿದುಬಂದಿದೆ.

ಚೈಲ್ಡ್​ ಕೇರ್​ ಅಧ್ಯಯನ ಮಾಡಿರುವ ಕೊರ್ಡೈಸ್​, ಸ್ಥಳೀಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. 17 ಮತ್ತು 18ನೇ ವರ್ಷದಲ್ಲಿ ಬಾಲಕನೊಂದಿಗೆ ಅನೇಕ ಬಾರಿ ಲೈಂಗಿಕ ಕ್ರಿಯೆ ನೆಡೆಸಿದ್ದಾಳೆ ಎನ್ನಲಾಗಿದೆ. ಕಾನೂನಾತ್ಮಕ ಕಾರಣಗಳಿಂದ ಬಾಲಕನ ಗುರುತನ್ನು ಬಹಿರಂಗಗೊಳಿಸಿಲ್ಲ. ಆದರೆ, ಪೊಲೀಸ್​ ವಿಚಾರಣೆ ವೇಳೆ ಬಾಲಕ ಮಾತನಾಡಿದ್ದು, ಅವರು ನನ್ನೊಂದಿಗೆ ಅದನ್ನು ಮಾತ್ರ ಬಯಸುತ್ತಿದ್ದರು. ನನ್ನ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ನನಗೀಗ ಭಾಸವಾಗುತ್ತಿದೆ ಎಂದು ಹೇಳಿದ್ದಾನೆ.

ಈ ಪ್ರಕರಣದಲ್ಲಿ ಜುಲೈ 9, 2018ರಂದೇ ಆರೋಪಿ ಕೊರ್ಡೈಸ್​ರನ್ನು ಪೊಲೀಸರು ವಿಂಡ್ಸರ್​ನಲ್ಲಿ ನಿವಾಸದಲ್ಲಿ ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ. (ಏಜೆನ್ಸೀಸ್​)