ಮಹಾರಾಷ್ಟ್ರ: ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಕ್ಕೆ ವ್ಯಕ್ತಿಯೊಬ್ಬ ಲಿವ್-ಇನ್ ಸಂಗಾತಿಯ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಗಢದಲ್ಲಿ ನಡೆದಿದೆ. ಯುವತಿಯನ್ನು ಕೊಂದು ಆಕೆಯ ದೇಹವನ್ನು ಗುಜರಾತ್ನ ವಲ್ಸಾದ್ ತೊರೆಯಲ್ಲಿ ಎಸೆದುಬಂದಿದ್ದ ಅದಕ್ಕೆ ಆತನ ಪತ್ನಿಯೂ ಸಹಾಯ ಮಾಡಿದ್ದಳು.
ಮೇಕಪ್ ಕಲಾವಿದೆಯಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಮಹತ್ ಎಂದು ಪೊಲೀಸರು ಗುರುತಿಸಿದ್ದಾರೆ.
ಮೇಕಪ್ ಕಲಾವಿದೆಯಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ನೈನಾ ಮಹತ್ ಎಂದು ಪೊಲೀಸರು ಗುರುತಿಸಿದ್ದು, ಆಕೆ ಆರೋಪಿ ಮನೋಹರ್ ಶುಕ್ಲಾ ಜತೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದಳು, ಶುಕ್ಲಾ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ.
ಆರೋಪಿ ಶುಕ್ಲಾಗೆ ನೈನಾ ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಳು, ಆದರೆ ಆತ ನಿರಾಕರಿಸಿದಾಗ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾಳೆ. ಶುಕ್ಲಾ ಪ್ರಕರಣವನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದ. ಆಕೆ ನಿರಾಕರಿಸಿದಾಗ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕೆಯನ್ನು ಕೊಲೆ ಮಾಡಿ ನಂತರ ವಲ್ಸಾದ್ ತೊರೆಯಲ್ಲಿ ಎಸೆಯುವ ಮೊದಲು ಸೂಟ್ಕೇಸ್ನಲ್ಲಿ ತುಂಬಲು ತನ್ನ ಹೆಂಡತಿಯ ಸಹಾಯ ಕೋರಿದ್ದ, ಘಟನೆ ಆಗಸ್ಟ್ 9ರಂದು ನಡೆದಿದೆ.
ಆಗಸ್ಟ್ 12ರಂದು ನೈನಾ ಕಾಣೆಯಾಗಿರುವ ಬಗ್ಗೆ ಆಕೆಯ ದೂರು ಸಹೋದರಿ ಸಲ್ಲಿಸಿದ್ದರು. ಸಹೋದರಿ ದೂರಿನ ಪ್ರಕಾರ,ತನ್ನ ವಿರುದ್ಧ ದಾಖಲಾಗಿರುವ ದೂರುಗಳನ್ನು ಹಿಂತೆಗೆದುಕೊಳ್ಳುವಂತೆ ಶುಕ್ಲಾ ನೈನಾ ಮೇಲೆ ಒತ್ತಡ ಹೇರುತ್ತಿದ್ದ ಹಾಗೆ ಮಾಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಶುಕ್ಲಾ ಹಾಗೂ ಆತನ ಪತ್ನಿಯನ್ನು ಮಂಗಳವಾರ ಬಂಧಿಸಲಾಗಿದೆ.