ನ್ಯೂಸ್

ವಿವಾಹ ನೋಂದಣಿ ಮಾಡಿಸಲು ಸಂಬಂಧಪಟ್ಟವರ ತರಲು ಒತ್ತಾಯ

ರಾಣೆಬೆನ್ನೂರ: ತಾಲೂಕಿನ ನಿವಾಸಿಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆ, ರಾಜ್ಯಗಳಿಂದ ಇಲ್ಲಿಗೆ ವಿವಾಹ ನೋಂದಣಿ ಮಾಡಿಸಲು ಬಂದರೆ ತಕ್ಷಣ ಸಂಬಂಧಿಸಿದ ಪೊಲೀಸ್​ ಇಲಾಖೆ ಹಾಗೂ ಮುಖಂಡರ ಗಮನಕ್ಕೆ ತರಬೇಕು ಎಂದು ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಾಲೂಕು ನೋಂದಣಾಧಿಕಾರಿಗೆ ವಿಶ್ವನಾಥ ಸುಬೇದಾರ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಯುವತಿಯರು ಅತಿಯಾದ ಮೊಬೈಲ್​ ಬಳಕೆಯಿಂದಾಗಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಹೆಣ್ಣು ಮಕ್ಕಳು ಮೋಸ ಹೋಗುತ್ತಿದ್ದಾರೆ. ಇದರಿಂದ ಮಕ್ಕಳನ್ನು ಹತ್ತು ಹೊತ್ತು ಬೆಳೆಸಿದ ಪಾಲಕರಿಗೆ ಮತ್ತು ಕುಟುಂಬದವರು ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ. ಯುವಕ ಯುವತಿಯರು ತಂದೆ ತಾಯಿಗೆ ಮೋಸ ಮಾಡಿ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಪ್ರೀತಿಸಿ ಮದುವೆಯಾಗಿ ಒಂದು ವರ್ಷ ಕೂಡ ಬಾಳುವೆ ಮಾಡದೆ ಎಷ್ಟೋ ಪ್ರಕರಣಗಳು ಬಿಡುಗಡೆಯಾಗುತ್ತಿವೆ. ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ತಡೆಗಟ್ಟಬೇಕಾದರೆ ರಾಣೆಬೆನ್ನೂರ ತಾಲೂಕು ಬಿಟ್ಟು ಬೇರೆ, ಬೇರೆ ಜಿಲ್ಲೆ ಮತ್ತು ತಾಲೂಕುಗಳಿಂದ ವಿವಾಹ ನೋಂದಣಿಗೆ ಬಂದರೆ ತಕ್ಷಣ ಪೊಲೀಸ್​ ಇಲಾಖೆ ಮತ್ತು ಸಂಬಂಧಿಸಿದ ಮುಖಂಡರ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ರಾಜೇಶ ಅಂಗಡಿ, ಬಸವರಾಜ ಕಡೂರ, ಹೊನ್ನಪ್ಪ ಮೀಸೇರ, ಮಂಜುನಾಥ ಸಾಂಬೋಜಿ, ಮಂಜುನಾಥ ಗುಂಡಣ್ಣನವರ, ನಾಗರಾಜ ಪೂಜಾರ, ರಮೇಶ ಪೂಜಾರ, ಮಂಜ ಗಂಗಾಪುರ, ನಾಗರಾಜ ಪೂಜಾರ, ದುರ್ಗಪ್ಪ ಉಜೇರ, ಶಿವರಾಜ ಅಣ್ಣೇರ, ಪ್ರಭುದೇವ ಉಜೇರ, ಪರಮನ ಪೂಜಾರ, ಪ್ರಭು ಪೂಜಾರ, ಕೊಟ್ರೇನೆ ಅಂಬಲೇರ, ನಿಂಗಪ್ಪ ಸಣ್ಣಕೊಟ್ರಪ್ಪನವರ, ಮಂಜಪ್ಪ ಮಣ್ಣಜೇರ ಮತ್ತಿತರರು ಉಪಸ್ಥಿತರಿದ್ದರು.