ನ್ಯೂಸ್

ಆಹಾ ನಮ್​ ಮದ್ವೆಯಂತೆ; ಕೊನೆಗೂ 'ಸಪ್ತಪದಿ'ಗೆ ಮುಹೂರ್ತ...

Bellari - Heera Nayak

ಬೆಂಗಳೂರು: ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಇಲ್ಲೊಂದಷ್ಟು ಜೋಡಿಗಳ ಮದುವೆ ಲಾಕ್​ಡೌನ್​ ಅವಧಿಯಲ್ಲಿಯೇ ಮುಗಿದುಹೋಗಿರಬೇಕಿತ್ತು. ಆದರೆ ಅಂದುಕೊಂಡ ಹಾಗಾಗದೆ ಈ ವಧು-ವರರು ನಿರಾಸೆಗೀಡಾಗಿದ್ದರು. ಆದರೆ ಇದೀಗ ಅವರ ಮುಖದಲ್ಲಿ ಖುಷಿ ಕಾಣಿಸಿದೆ.

ಏಕೆಂದರೆ ಸರ್ಕಾರದಿಂದಲೇ ಉಚಿತವಾಗಿ ಮದುವೆ ನಡೆಯಲಿದೆ ಎಂದು 'ಆಹಾ ನಮ್​ ಮದ್ವೆಯಂತೆ' ಎಂಬ ಖುಷಿಯಲ್ಲಿದ್ದು ಬೇಸರಕ್ಕೂ ಒಳಗಾಗಿದ್ದ ಜೋಡಿಗಳಿಗೆ ಈಗ ಕೊನೆಗೂ 'ಸಪ್ತಪದಿ'ಗೆ ಮುಹೂರ್ತ ಕೂಡಿ ಬಂದಿದೆ.

ಹೌದು.. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆ ವ್ಯಾಪ್ತಿಯ 'ಎ' ದರ್ಜೆಯ ದೇಗುಲಗಳಲ್ಲಿ ನಡೆಸಲು ಉದ್ದೇಶಿಸಿರುವ ಉಚಿತ ಸಾಮೂಹಿಕ ವಿವಾಹ ಯೋಜನೆ 'ಸಪ್ತಪದಿ'ಗೆ ಕೊನೆಗೂ ಕಾಲ ಕೂಡಿ ಬಂದಿದೆ. ಡಿಸೆಂಬರ್ 2, 7 ಮತ್ತು 10ರಂದು ಮೂರು ಹಂತಗಳಲ್ಲಿ ಮಹೂರ್ತ ನಿಗದಿಯಾಗಿದೆ.

ಮೊದಲಿಗೆ ಕಳೆದ ಏಪ್ರಿಲ್​-ಮೇನಲ್ಲಿ ಈ ಮದುವೆ ನಡೆಯಬೇಕಿತ್ತು. ಆದರೆ ಕರೊನಾ ಹಾವಳಿ ಹಿನ್ನೆಲೆಯಲ್ಲಿ ಜುಲೈ ಹಾಗೂ ಆಗಸ್ಟ್​ ತಿಂಗಳಿಗೆ ಮುಂದೂಡಲಾಗಿತ್ತು. ಅದಾಗ್ಯೂ ಕರೊನಾ ಸೋಂಕು ನಿಯಂತ್ರಣಕ್ಕೆ ಬರದ್ದರಿಂದ ಮದುವೆ ಮತ್ತೆ ಮುಂದೂಡಲ್ಪಟ್ಟಿತ್ತು. ಇದೀಗ ಡಿಸೆಂಬರ್​ನಲ್ಲಿ ಸಪ್ತಪದಿ ನಡೆಯಲಿದೆ.