ನ್ಯೂಸ್

ಬೀದಿ ನಾಯಿಗಳ ಬಗ್ಗೆ ಸುಪ್ರೀಂ ತೀರ್ಪು; ಸಹಾನುಭೂತಿಯ ನಿರ್ಧಾರ ಎಂದ ವಿಪಕ್ಷ ನಾಯಕ ರಾಹುಲ್! | Rahul Gandhi

Rahul Gandhi: ದೆಹಲಿ NCRನ ಬೀದಿ ನಾಯಿಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ (ಆಗಸ್ಟ್​​22) ಸ್ವಾಗತಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಈ ಕುರಿತಾಗಿ ಪೋಸ್ಟ್​ ಹಂಚಿಕೊಂಡಿರುವ ರಾಹುಲ್​, ಇದನ್ನು ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸಮತೋಲನಗೊಳಿಸುವ ಪ್ರಮುಖ ಹೆಜ್ಜೆ ಎಂದು ಕರೆದಿದ್ದಾರೆ. ಈ ವಿಧಾನವು ಸಹಾನುಭೂತಿಯುಳ್ಳದ್ದು, ವೈಜ್ಞಾನಿಕ ತಾರ್ಕಿಕತೆಯಲ್ಲಿ ಬೇರೂರಿದೆ ಎಂದು ಬರೆದಿದ್ದಾರೆ.

ನ್ಯಾಯಾಲಯದ ಆದೇಶ ಪಾಲಿಸುತ್ತೇವೆ ಎಂದ ದೆಹಲಿ ಮೇಯರ್​​

ಈ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ದೆಹಲಿ ಮೇಯರ್ ರಾಜಾ ಇಕ್ಬಾಲ್ ಸಿಂಗ್, ಸುಪ್ರೀಂ ಕೋರ್ಟ್ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದು, ನಾವೆಲ್ಲರೂ ಬೀದಿ ನಾಯಿಗಳನ್ನು ಪ್ರೀತಿಸುತ್ತೇವೆ ಮತ್ತು ನ್ಯಾಯಾಲಯದ ಆದೇಶವನ್ನು 100% ಜಾರಿಗೆ ತರುತ್ತೇವೆ ಎಂದರು.

ನ್ಯಾಯಾಲಯ ತೀರ್ಪು ಏನು.?

ರೇಬಿಸ್ ಸೋಂಕಿಗೆ ಒಳಗಾದ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ಬೀದಿ ನಾಯಿಗಳನ್ನು ಹೊರತುಪಡಿಸಿ ಬೇರೆ ಶ್ವಾನಗಳನ್ನು ಸಂತಾನಹರಣ ಮತ್ತು ರೋಗನಿರೋಧಕ ಶಕ್ತಿಯನ್ನು ನೀಡಿದ ನಂತರ ಅವುಗಳನ್ನು ಮತ್ತೆ ಅದೇ ಪ್ರದೇಶಕ್ಕೆ ಬಿಡಬೇಕು ಎಂದು ಆದೇಶಿಸಿತ್ತು.

ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದಕ್ಕೆ ಅನುಮತಿ ನಿರಾಕರಿಸಿರುವ ನ್ಯಾಯಾಲಯ, ಬೀದಿ ನಾಯಿಗಳಿಗೆ ಆಹಾರ ನೀಡಲು ಪುರಸಭೆಯ ವಾರ್ಡ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಲು ಎಂಸಿಡಿ (ದೆಹಲಿ ಪುರಸಭೆ) ಗೆ ಆದೇಶಿಸಿದೆ. ಅದೇ ರೀತಿ ಶ್ವಾನಪ್ರಿಯರು ಪ್ರಿಯರು ಅವುಗಳನ್ನು ದತ್ತು ಪಡೆಯಲು ಎಂಸಿಡಿ ಮುಂದೆ ಅರ್ಜಿ ಸಲ್ಲಿಸಬಹುದು ಎಂದು  ತಿಳಿಸಿದೆ.(ಏಜೆನ್ಸೀಸ್)