ಲಂಡನ್: ವಿಶ್ವದ ಟೆಕ್ ದೈತ್ಯ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಎಷ್ಟೇ ಬ್ಯುಸಿ ಇದ್ದರೂ, ತನ್ನ ಕುಟುಂಬಕ್ಕೆ ಆದ್ಯತೆ ನೀಡುವುದನ್ನು ಗಮನಿಸಬಹುದು. ಈಗ ಅವರು ತನ್ನ ಪತ್ನಿ ಪ್ರಿಸ್ಸಿಲ್ಲಾ ಚಾನ್ ಮೇಲಿರುವ ಪ್ರೀತಿಯನ್ನು ಅಭೂತಪೂರ್ವ ಉಡುಗೊರೆ ನೀಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಇದರ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಚಿತ್ರಗಳು ಆತ್ಯಾಕರ್ಷಕವಾಗಿವೆ.
ರೋಮನ್ ಶೈಲಿಯಲ್ಲಿ ರೂಪಿಸಲಾಗಿರುವ ಪ್ರಿಸ್ಸಿಲ್ಲಾ ಚಾನ್ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, ಮನೆಯ ಅಂಗಳದಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಈ ಬೃಹತ್ ಪ್ರತಿಮೆಯ ಪಕ್ಕದಲ್ಲಿ ನಿಂತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
"ನಾವು ಪತ್ನಿಯ ಪ್ರತಿಮೆಯನ್ನು ಕೆತ್ತಿಸುವ ರೋಮನ್ ಸಂಸ್ಕೃತಿಯನ್ನು ಮರಳಿ ತಂದಿದ್ದೇವೆ" ಎಂದು ಅವರು ಬರೆದಿದ್ದಾರೆ. ಅವರು ಅದರ ವಿನ್ಯಾಸಕ ಡೇನಿಯಲ್ ಅರ್ಶಮ್ಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರಿಸ್ಸಿಲ್ಲಾ ನನ್ನನ್ನು ಕಳೆದುಕೊಳ್ಳಬೇಡಿ... ಎಂದು ಪೋಸ್ಟ್ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅವರ ಪ್ರೀತಿಗೆ ನೆಟಿಜನ್‌ಗಳು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ 2003 ರಲ್ಲಿ ಪ್ರಿಸ್ಸಿಲ್ಲಾ ಚಾನ್ ರನ್ನು ಮೊದಲ ಬಾರಿಗೆ ಭೇಟಿಯಾದ ಜುಕರ್‌ಬರ್ಗ್ ಹಲವಾರು ವರ್ಷ ಡೇಟಿಂಗ್ ಮಾಡಿ 2012 ರಲ್ಲಿ ವಿವಾಹವಾದರು. ಅವರಿಗೆ ಮ್ಯಾಕ್ಸಿಮಾ, ಆಗಸ್ಟು ಮತ್ತು ಅರೆಲಿಯಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ.