ನ್ಯೂಸ್

ಅಮೃತ ಬಿಂದು

vijayavani

ಭೂತಿರುದ್ರಾಕ್ಷಲಿಂಗಾನಾಂ ಶರೀರೇ ಧಾರಣಂ ಸದಾ | ಏಕೋನತ್ರಿಂಶಕಂ ಶೀಲಂ ಮೋಕ್ಷಮಾರ್ಗೆಕಸಾಧನಮ್ ||

ಶರೀರದ ಮೇಲೆ ಸದಾಕಾಲ ವಿಭೂತಿ, ರುದ್ರಾಕ್ಷ, ಲಿಂಗಗಳನ್ನು ಧರಿಸುವುದು ಇಪ್ಪತ್ತೊಂಬತ್ತನೆಯ ಶೀಲ.

ಇದು ಮೋಕ್ಷಮಾರ್ಗಕ್ಕೆ ಏಕೈಕ ಸಾಧನ. ಶಿವನು ಸತ್, ಚಿತ್, ಆನಂದರೂಪನಾಗಿದ್ದು; ಇಷ್ಟಲಿಂಗವು

ಶಿವನ ಸದ್ರೂಪದ ಸಂಕೇತ. ಶಿವನ ಮೈಬೆಳಗಿನ ರೂಪವಾದ ವಿಭೂತಿಯು ಅವನ ಚಿದ್ರೂಪದ ಕುರುಹು.

ಶಿವನ ಆನಂದಾಶ್ರುಗಳಿಂದ ಜನಿಸಿದ ರುದ್ರಾಕ್ಷವು ಅವನ ಆನಂದರೂಪದ ಸಂಕೇತ. ಈ ಮೂರನ್ನೂ

ಶ್ರದ್ಧೆಯಿಂದ ಸದಾ ಧರಿಸುವ ಸಾಧಕನಿಗೆ ಶಿವನ ಸಚ್ಚಿದಾನಂದ ರೂಪಗಳ ಅನುಗ್ರಹ ಮತ್ತು ಸಾಕ್ಷಾತ್ಕಾರ ಉಂಟಾಗುತ್ತವೆ.

| ಚಂದ್ರಜ್ಞಾನಾಗಮ (9.86) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು