ಶಿಕಾರಿಪುರ: ಛತ್ರಪತಿ ಶಿವಾಜಿ ಹಿಂದು ಸಮಾಜದ ರಕ್ಷಣೆಗಾಗಿ ಅವತರಿಸಿ ಬಂದ ಶ್ರೇಷ್ಠ ರಾಜ. ಅವರ ಸಂಕಲ್ಪ ಶಕ್ತಿಯ ಫಲವಾಗಿ ಹಿಂದು ಸಾಮ್ರಾಜ್ಯದ ಮೇರು ದೊರೆಯಾಗಿ ಮೆರೆದರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕು ಆಡಳಿತ, ಮರಾಠ ಸಮಾಜದಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯದಿಂದಲೇ ಶಿವಾಜಿಗೆ ದೊರೆತ ಸಂಸ್ಕಾರ ಅವರನ್ನು ಒಬ್ಬ ಮೇರು ವ್ಯಕ್ತಿಯನ್ನಾಗಿ ಮಾಡಿತು ಎಂದರು.
ಹಿಂದು ವಿರೋಧಿಗಳಲ್ಲಿ ನಡುಕ ಹುಟ್ಟಿಸಿ ಧರ್ಮದ ಶ್ರೇಷ್ಠತೆ ಕಾಪಾಡಿದರು. ಇಂದಿಗೂ ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ಪರಾಕ್ರಮಗಳು ಜನಮನದಲ್ಲಿ ಚಿರಸ್ಥಾಯಿಯಾಗಿವೆ. ಮರಾಠ ಸಮಾಜ ಅತ್ಯಂತ ಸ್ವಾಭಿಮಾನಿ, ಅಪ್ಪಟ ದೇಶಭಕ್ತಿಯ ಸಹೃದಯಿ ಸಮಾಜ. ದೇಶದ ಹಿತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಮರಾಠ ಸಮಾಜ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಬೆಳೆಯಬೇಕು ಎಂದರು.
ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಮರಾಠ ಸಮಾಜದ ಅಧ್ಯಕ್ಷ ಗುರುರಾಜ್ ಜಗತಾಪ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುಧೀರ್, ವಸಂತ ಗೌಡ, ಹನುಮಂತಪ್ಪ, ರಾಜ್‌ಕುಮಾರ್ ಇತರರಿದ್ದರು.