ಆಂಧ್ರಪ್ರದೇಶ: 2024ರ ಸಂಕ್ರಾಂತಿ ಹಬ್ಬದ ವಾರದಲ್ಲಿ ಟಾಲಿವುಡ್ ಸೇರಿದಂತೆ ಇತರೆ ಚಿತ್ರರಂಗದ ಹಲವಾರು ಸಿನಿಮಾಗಳು ರಿಲೀಸ್ ಆಗಲು ಸಜ್ಜಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ಕೊಡುವುದು ಖಚಿತವಾಗಿದೆ. ಸದ್ಯ ಈ ಸಾಲಿನಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ 'ಗುಂಟೂರು ಕಾರಂ' ಚಿತ್ರವು ಸೇರಿದೆ ಎಂಬುದು ಗಮನಾರ್ಹ.
ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಗೆ ತಮ್ಮ ಸಿನಿಮಾಗಳು ರಿಲೀಸ್ ಆಗಬೇಕು ಎಂಬ ಯೋಚನೆಯಲ್ಲಿರುವ ನಿರ್ದೇಶಕರು, ಅನ್ಯ ಸಿನಿಮಾಗಳೊಂದಿಗೆ ಭಾರೀ ಪೈಪೋಟಿ ಕೊಡಲು ಸನದ್ಧಗೊಂಡಿದ್ದಾರೆ. 'ಗುಂಟೂರು ಕಾರಂ', 'ಸೈಂಧವ್', 'ಈಗಲ್', 'ಫ್ಯಾಮಿಲಿ ಸ್ಟಾರ್', 'ಹನುಮಾನ್', 'ನಾ ಸಾಮಿ ರಂಗ', 'ಅಯಾಲಾನ್' ಮತ್ತು 'ಲಾಲ್ ಸಲಾಮ್' ಚಿತ್ರಗಳು ಹಬ್ಬದ ವಾರದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಸಿನಿಮಾಗಳು.
ಇದನ್ನೂ ಓದಿ: 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತಾ ಅಂಬಾನಿ; 1.4 ಲಕ್ಷ ಜನರಿಗೆ ಅನ್ನದಾನ..600 ಜನರಿಗೆ ಫುಡ್ ಕಿಟ್ ಕಿಟ್ ವಿತರಣೆ
ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೆ ಸಾಲುಗಟ್ಟಿ ನಿಂತಿರುವ ಸ್ಟಾರ್ ನಟರ ಸಿನಿಮಾಗಳ ಪಟ್ಟಿ ನೋಡಿ ಇದೀಗ ಸಿನಿಪ್ರೇಕ್ಷಕರೇ ಅಚ್ಚರಿಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪಟ್ಟಿಯಲ್ಲಿರುವ ಬಹುನಿರೀಕ್ಷಿತ ಚಿತ್ರಗಳ ರಿಲೀಸ್ ದಿನಾಂಕಗಳು ಬದಲಾಗುವ ಸಾಧ್ಯತೆಗಳು ಹೆಚ್ಚಿದೆ ಎಂದು ನಿರೀಕ್ಷಿಸಲಾಗಿದೆ, (ಏಜೆನ್ಸೀಸ್).