ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದ ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಮತ್ತು ಜೋಳದ ಚೀಲಗಳನ್ನು ಜಿಲ್ಲಾ ಸಹಾಯಕ ಆಯುಕ್ತೆ ಮೈಬೂಬಿ ಮತ್ತು ತಹಸೀಲ್ದಾರ್ ರಾಜು ಪಿರಂಗಿ ಮಂಗಳವಾರ ಪರಿಶೀಲಿಸಿದರು. 
ನ್ಯೂಸ್

ಪಡಿತರ ಅಕ್ರಮ ದಾಸ್ತಾನು ಪರಿಶೀಲನೆ

ಕುರುವತ್ತಿ ಶ್ರೀಕಾಂತಪ್ಪ

ಮಾನ್ವಿ: ತಾಲೂಕಿನ ಪೋತ್ನಾಳ ಹೊರವಲಯದ ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮತ್ತು ಜೋಳ ಶೇಖರಣೆ ಖಚಿತ ಮಾಹಿತಿ ಪಡೆದ ಜಿಲ್ಲಾ ಸಹಾಯಕ ಆಯುಕ್ತೆ ಮೈಬೂಬಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುರುರಾಜ ಶೆಟ್ಟಿ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಪಡಿತರ ಅಕ್ಕಿ ಮತ್ತು ಜೋಳದ ಚೀಲಗಳು ದೊರೆತ್ತಿದ್ದು, ಅನ್ನಭಾಗ್ಯದ ಗುರುತು ಇರುವ ಚೀಲಗಳು ಪತ್ತೆಯಾಗಿವೆ. ಅಧಿಕಾರಿಗಳು ಗೋದಾಮಿಗೆ ಬೀಗ ಮುದ್ರೆ ಹಾಕಿದ್ದು, ಪಡಿತರ ಧಾನ್ಯಗಳ ಚೀಲಗಳನ್ನು ಪತ್ತೆ ಹಚ್ಚಿ ನಿಖರ ಮಾಹಿತಿ ನೀಡುವುದಾಗಿ ತಿಳಿಸಿದರು.

ತಹಸೀಲ್ದಾರ್ ರಾಜು ಪಿರಂಗಿ, ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣ, ವಾಣಿಜ್ಯ ಇಲಾಖೆ, ಎಪಿಎಂಸಿ ಅಧಿಕಾರಿಗಳು ಇದ್ದರು.