ನ್ಯೂಸ್

102 ಅಂತಸ್ತಿನ ಕಟ್ಟಡದ ಮೇಲಕ್ಕೆ ಹತ್ತಿ ಸೆಲ್ಫಿ ತೆಗೆದ! ವಿಡಿಯೋ ನೋಡಿ

ನವದೆಹಲಿ:  ಇಂಟರ್ನೆಟ್ ಜಗತ್ತಿನಲ್ಲಿ ತಮ್ಮನ್ನು ತಾವು  ವೈರಲ್​ ಮಾಡಿಕೊಳ್ಳಲು  ಜನರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಇಲ್ಲಿ ಹುಡುಗನೊಬ್ಬ 102 ಅಂತಸ್ತಿನ ಕಟ್ಟಡದ ಮೇಲಕ್ಕೆ ಹತ್ತಿ ಜಗತ್ತು ಬೆಚ್ಚಿ ಬೀಳುವಷ್ಟು ಸಾಹಸ ಮಾಡಿದ್ದಾನೆ. ಈ ಕುಡಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ಈ ವೀಡಿಯೋ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದೆ ಎನ್ನಲಾಗಿದೆ.

ಈ ವೀಡಿಯೋ ನೋಡಿ, ಹುಡುಗನೊಬ್ಬ ತನ್ನದೇ ಸೆಲ್ಫಿ  ತೆಗೆಯಲು 102 ಅಂತಸ್ತಿನ ಕಟ್ಟಡದ ಮೇಲಕ್ಕೆ ಹತ್ತಿ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿದೆ. ಇದಾದ ನಂತರ ಏನಾಯಿತು ಎಂದು ನೋಡಿದರೆ ನಿಮ್ಮ ಹೃದಯ ಕಂಪಿಸುವುದು ಖಂಡಿತ.

ಹುಡುಗ ಕೈಯಲ್ಲಿ ಸೆಲ್ಫಿ ಸ್ಟಿಕ್ ಹಿಡಿದು 102 ಅಂತಸ್ತಿನ ಕಟ್ಟಡವನ್ನು ಏರುತ್ತಾನೆ. ಇದಾದ ನಂತರ ಅಲ್ಲಿಯೇ ತನ್ನ ಸ್ವಂತ ವಿಡಿಯೋ ರೆಕಾರ್ಡಿಂಗ್ ಆರಂಭಿಸುತ್ತಾನೆ. ನಂರ ಕಟ್ಟಡದ ತುದಿಯಲ್ಲಿ ನಿಂತು ಸೆಲ್ಫಿ ವಿಡಿಯೋ ಮಾಡುತ್ತಾನೆ. ಇದನ್ನು ನೋಡಿದ ನಂತರ, ಮೈರೋಮಾಂಚನವಾಗುತ್ತದೆ.

ಈ ವೀಡಿಯೊವನ್ನು @livejn ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ, ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.  ಯಾಕೆ ಇಂತಹ ಅಪಾಯಕಾರಿ ಸಾಹಸ ಮಾಡುತ್ತೀರ?, ನಿಮಗೆ ಭಯ ಆಗುವುದೇ ಇಲ್ವ? ಇದೆಲ್ಲ ಬೇಕಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.