ನ್ಯೂಸ್

ಮನ್ ಕಿ ಬಾತ್‌: ನಿಸ್ವಾರ್ಥ ಸೇವೆ ಮತ್ತು ಶಿಸ್ತು RSSನ ನಿಜವಾದ ಶಕ್ತಿ ಎಂದ ಪ್ರಧಾನಿ ಮೋದಿ

RSS: ಆರ್‌ಎಸ್‌ಎಸ್ (RSS) ನಿಸ್ವಾರ್ಥ ಸೇವೆಯ ಮನೋಭಾವ ಮತ್ತು ಶಿಸ್ತಿನ ಪಾಠವೇ ಸಂಘದ ನಿಜವಾದ ಶಕ್ತಿಗಳಾಗಿದ್ದು, ಇದರ ಅಸಂಖ್ಯಾತ ಸ್ವಯಂಸೇವಕರ ಪ್ರತಿಯೊಂದು ಕಾರ್ಯದಲ್ಲೂ ರಾಷ್ಟ್ರ ಮೊದಲು ಎಂಬುದು ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ, (ಸೆಪ್ಟೆಂಬರ್​,28) ಹೇಳಿದ್ದಾರೆ.

ಈ ಬಗ್ಗೆ 126ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಶ್ಲಾಘಿಸುತ್ತಾ ಮಾತನಾಡಿದ ಮೋದಿ, ಇನ್ನು ಕೆಲವೇ ದಿನಗಳಲ್ಲಿ ನಾವು ವಿಜಯದಶಮಿಯನ್ನು ಆಚರಿಸಲಿದ್ದೇವೆ. ಈ ಬಾರಿಯ ವಿಜಯದಶಮಿ ಮತ್ತೊಂದು ಕಾರಣಕ್ಕಾಗಿ ಇನ್ನಷ್ಟು ವಿಶೇಷವಾಗಿದೆ. ಈ ದಿನ, ಆರ್‌ಎಸ್‌ಎಸ್ ತನ್ನ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

RSS ಶತಮಾನದ ಪ್ರಯಾಣವು ಗಮನಾರ್ಹ ಮಾತ್ರವಲ್ಲದೆ ಸ್ಪೂರ್ತಿದಾಯಕವಾಗಿದೆ. ಅಲ್ಲದೆ, ನೂರು ವರ್ಷಗಳ ಹಿಂದೆ, RSS ಸ್ಥಾಪನೆಯಾದಾಗ, ನಮ್ಮ ರಾಷ್ಟ್ರವು ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಸಲ್ಪಟ್ಟಿತ್ತು. ಶತಮಾನಗಳಷ್ಟು ಹಳೆಯದಾದ ಈ ಗುಲಾಮಗಿರಿಯು ನಮ್ಮ ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನದ ಮೇಲೆ ಆಳವಾದ ಗಾಯವನ್ನು ಉಂಟುಮಾಡಿದೆ ಎಂದು ಮೋದಿ ಹೇಳಿದ್ದಾರೆ.

ದೇಶದ ಜನರು ಕೀಳರಿಮೆಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಇದ್ದರಿಂದ, ದೇಶದ ಸ್ವಾತಂತ್ರ್ಯದ ಜೊತೆಗೆ, ದೇಶವನ್ನು ಸೈದ್ಧಾಂತಿಕ ಗುಲಾಮಗಿರಿಯಿಂದ ಮುಕ್ತಗೊಳಿಸುವುದು ಸಹ ಅಗತ್ಯವಾಗಿತ್ತು ಎಂದು ಮೋದಿ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಮೋದಿ, 1925 ರಲ್ಲಿ ಕೆ.ಬಿ. ಹೆಡ್ಗೆವಾರ್ ಇದೇ ಉದ್ದೇಶಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅನ್ನು ಸ್ಥಾಪಿಸಿದರು. ಹೆಡ್ಗೆವಾರ್ ನಂತರ ಗುರು ಗೋಲ್ವಾಲ್ಕರ್ ರಾಷ್ಟ್ರ ಸೇವೆಯ ಈ ಮಹಾಯಜ್ಞವನ್ನು ಮುಂದುವರೆಸಿದರು ಎಂದು RSS ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ.

RSS ನಿಸ್ವಾರ್ಥ ಸೇವೆಯ ಮನೋಭಾವ ಮತ್ತು ಶಿಸ್ತಿನ ಪಾಠ, ಇವು ಸಂಘದ ನಿಜವಾದ ಶಕ್ತಿಗಳಾಗಿವೆ. ಇಂದು, RSS ಕಳೆದ 100 ವರ್ಷಗಳಿಂದ ವಿಶ್ರಾಂತಿ ಇಲ್ಲದೆ ರಾಷ್ಟ್ರದ ಸೇವೆಯಲ್ಲಿ ದಣಿವರಿಯಿಲ್ಲದೆ ತೊಡಗಿಸಿಕೊಂಡಿದೆ. ಅಲ್ಲದೆ, RSS ಪ್ರಕೃತಿ ವಿಕೋಪ ಸಂಭವಿಸಿದಾಗ, RSS ಸ್ವಯಂಸೇವಕರು ಮೊದಲು ಅಲ್ಲಿಗೆ ತಲುಪುತ್ತಾರೆ ಎಂದು ನಾವು ನೋಡುತ್ತೇವೆ. RSSನ ಅಸಂಖ್ಯಾತ ಸ್ವಯಂಸೇವಕರ ಪ್ರತಿಯೊಂದು ಕ್ರಿಯೆಯಲ್ಲೂ ರಾಷ್ಟ್ರ ಮೊದಲು ಎಂಬ ಮನೋಭಾವ ಯಾವಾಗಲೂ ಸರ್ವೋಚ್ಚವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ. (ಏಜೆನ್ಸೀಸ್)