ನ್ಯೂಸ್

ಮನ್​ ಕೀ ಬಾತ್​: ಕ್ರೀಡೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಆದ್ಯತೆ ನೀಡಬೇಕು! Narendra Modi

Narendra Modi: ಹೊಸದಾಗಿ ಪರಿಚಯಿಸಲಾದ 'ಖೇಲೋ ಭಾರತ್ ನೀತಿ 2025ರ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

ಖೇಲೋ ಭಾರತ್​ ನೀತಿಯ ಪ್ರಮುಖ ಅಂಶಗಳೊಂದರೆ ದೇಶದ ಹಳ್ಳಿಗಳು, ಬಡವರು ಮತ್ತು ಹೆಣ್ಣುಮಕ್ಕಳಿಗೆ ಶಾಲಾ- ಕಾಲೇಜುಗಳಲ್ಲಿ ಕ್ರೀಡೆಯನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡುವುದು. ಕ್ರೀಡೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳು, ಕ್ರೀಡಾ ನಿರ್ವಹಣೆಗೆ ಬೇಕಾದ ಎಲ್ಲ ರೀತಿಯ ಸಹಾಯ ಮಾಡಲಾಗುವುದು" ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಭಾರತದ ಮುಂದಿನ ಕ್ರೀಡಾ ಭವಿಷ್ಯದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು " ನನಗೆ ಅನೇಕ ಯುವ ಕ್ರೀಡಾಪಟುಗಳು ಮತ್ತು ಅವರ ಪೋಷಕರಿಂದ ಸಂದೇಶಗಳು ಬಂದಿವೆ. ಇವುಗಳಲ್ಲಿ 'ಖೇಲೋ ಭಾರತ್ ನೀತಿ 2025' ಹೆಚ್ಚು ಮೆಚ್ಚುಗೆ ಪಡೆದಿದೆ. ಈ ನೀತಿಯ ಗುರಿ ಸ್ಪಷ್ಟವಾಗಿದ್ದು, ದೇಶವನ್ನು ಕ್ರೀಡಾ ಸೂಪರ್ ಪವರ್ ಮಾಡುವುದು" ಎಂದು ತಿಳಿಸಿದ್ದಾರೆ.

ಅಲ್ಲದೆ, ಕ್ರೀಡೆ ಉತ್ತಮ ಮನೋಬಲವನ್ನು ಬೆಳೆಸುತ್ತದೆ. ಇದು ಫಿಟ್ನೆಸ್, ಆತ್ಮವಿಶ್ವಾಸ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸುವ ಮಾರ್ಗವಾಗಿದೆ. ಆದ್ದರಿಂದ ಬಹಳಷ್ಟು ಆಟವಾಡಿ, ಎಂದು ಪ್ರೋತ್ಸಾಹಿಸಿದ್ದಾರೆ.

ಹೊಸ ನೀತಿಯು 2001 ರ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಬದಲಾಯಿಸುತ್ತದೆ. 2036ರ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಇಂಡಿಯಾವನ್ನು ಪ್ರಮುಖ ಸ್ಪರ್ಧಿಯಾಗಿ ಸ್ಥಾಪಿಸಲು ಈ ನೀತಿಯು ಸಹಾಯ ಮಾಡುತ್ತದೆ.