ನ್ಯೂಸ್

ಫಿಲ್ಮ್​ಮೇಕರ್​​ ಸನಲ್​​ ಶಶಿಧರನ್​​ ಬಂಧನ: ನಟಿ ಮಂಜು ವಾರಿಯರ್​ ಕೊಟ್ಟ ದೂರೇನು?

ಕೊಚ್ಚಿನ್​: ಹಲವು ಪ್ರಶಸ್ತಿ ಪುರಸ್ಕೃತ ಪ್ರಸಿದ್ದ ಫಿಲ್ಮ್​ಮೇಕರ್​ ಸನಲ್​ ಕುಮಾರ್​ ಶಶಿಧರನ್​​ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ನಟಿ ಮಂಜು ವಾರಿಯರ್​ ನೀಡಿದ ದೂರಿನ ಮೇರೆಗೆ ಅವರ ನಿವಾಸಕ್ಕೆ ತೆರಳಿ ಬಂಧಿಸಲಾಗಿದೆ.

ತಿರುವನಂತಪುರಂನಲ್ಲಿರುವ ಸನಾಲ್ (45) ನಿವಾಸದಲ್ಲಿ ಬಂಧಿಸಿ, ಕೊಚ್ಚಿನ್​ಗೆ ಕರೆತರಲಾಗಿದೆ. ಕೊಚ್ಚಿನ್​ನಲ್ಲೇ ದೂರು ದಾಖಲಾಗಿರುವುದರಿಂದ ಪ್ರಕರಣದ ವಿಚಾರಣೆಗೆ ಅವರನ್ನು ಇಲ್ಲೇ ಕರೆತರಲಾಗಿದೆ.

ಯಾವ ಕಾರಣಕ್ಕೆ ಸನಾಲ್​ ಅವರನ್ನು ಬಂಧಿಸಲಾಗಿದೆ. ಮಂಜು ವಾರಿಯರ್​ ನೀಡಿರುವ ದೂರಿನಲ್ಲಿ ಏನಿದೆ ಎಂಬುದೇ ಕುತೂಹಲ ಮೂಡಿಸಿದ್ದು ಕಾರಣ ಇಲ್ಲಿದೆ.

ಇತ್ತೀಚೆಗೆ ಫೇಸ್​ಬುಕ್​ ಪೋಸ್ಟ್​ ಮಾಡಿದ್ದ ಸನಲ್​ , ಮಂಜು ವಾರಿಯರ್​ ಜಿವಕ್ಕೆ ಅಪಾಯವಿದೆ. ಅವಳು ತನ್ನ ಹತ್ತಿರದ ಜನರಿಮದಲೇ ಅಪಾಯವನ್ನು ಎದುರಿಸುತ್ತಿದ್ದಾಳೆ. ಅವಳು ಕೆಲವರ ವಶದಲ್ಲಿದ್ದಾಳೆ. ಮಂಜುಗೆ ಏನಾದರೂ ತೊಂದರೆಯಾದರೆ ಆಕೆಯ ಮ್ಯಾನೇಜರ್​ಗಳಾದ ಬಿನೀಶ್​ ಚಂದ್ರನ್​ ಮತ್ತು ಬಿನು ನಾಯರ್​ ಜವಾಬ್ದಾರರು ಎಂದು ಹೆಸರು ಪ್ರಸ್ತಾಪಿಸಿ ಆರೋಪಿಸಿದ್ದರು. ಇದೀಗ ಈ ಪೋಸ್ಟ್​​ ಸನಲ್​ಗೆ ಮುಳುವಾಗಿದೆ.