ಕೇರಳ: 10 ವರ್ಷಗಳಿಂದ ದೂರವಾಗಿದ್ದ ಅಮ್ಮ- ಮಗಳು ಇನ್ಸ್ಟಾಗ್ರಾಮ್ ಪರಸ್ಪರ ಫೋಲೋ ಮಾಡುವ ಮೂಲಕ ಮಾಲಿವುಡ್ ನಟಿ ಮಂಜುವಾರಿಯರ್ ಹಾಗೂ ಪುತ್ರಿ ಮೀನಾಕ್ಷಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ.
ನಟ ದಿಲೀಪ್ ಅವರು ಪತ್ನಿ ಮಂಜುವಾರಿಯರ್ ಅವರಿಂದ ವಿಚ್ಛೇದನ ಪಡೆದು ವರ್ಷಗಲೇ ಕಳೆದು ಹೋಗಿದೆ. ಬಳಿಕ ಪುತ್ರಿ ಮೀನಾಕ್ಷಿ ತಂದೆಯೊಂದಿಗೆ ವಾಸಿಸುತ್ತಿದ್ದರು. ತಂದೆ ಮಗಳು ಸಭೆ ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ತಾಯಿಯ ಜತೆಗೆ ಮೀನಾಕ್ಷಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.ಇದು ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಆದರೆ ಇದೇ ಮೊದಲ ಬಾರಿಗೆ ನಟ ದಿಲೀಪ್ ಅವರ ಪುತ್ರಿ ಮೀನಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ತಾಯಿ ಫಾಲೋ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
1998 ರಲ್ಲಿ ದಿಲೀಪ್ ಮತ್ತು ಮಂಜು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನಂತರ ಈ ದಾಂಪತ್ಯದಲ್ಲಿ ಬಿರುಕು ಮೂಡಿ 2014 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ನಂತರ ಮಗಳು ಮೀನಾಕ್ಷಿ ತಂದೆ ಜತೆಗೆ ವಾಸವಾಗಿದ್ದಳು.
ಕೆಲ ದಿನಗಳ ಹಿಂದೆ ಮೀನಾಕ್ಷಿ ಎಂಬಿಬಿಎಸ್ ಪದವಿ ಮುಗಿಸಿದ್ದರು. ದಿಲೀಪ್ ಇನ್ಸ್ಟಾಗ್ರಾಮ್ನಲ್ಲಿ ಸರ್ಟಿಫಿಕೇಟ್ ಜತೆ ನಿಂತ ಮೀನಾಕ್ಷಿ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ಸಂತಸ ಹಂಚಿಕೊಂಡರು. ಆದರೆ ಈ ಸಂದರ್ಭದಲ್ಲಿ ಮಂಜು ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದೇ ಸಮಯದಲ್ಲಿ ಮಂಜು ಹಾಗೂ ಮೀನಾಕ್ಷಿ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಫೋಲೋ ಮಾಡುವ ಮೂಲಕ ನಿರಾಸೆಗೊಂಡ ಅಭಿಮಾನಿಗಳ ಮನದಲ್ಲಿ ಮುಂದಿನ ದಿನಗಳಲ್ಲಿ ತಾಯಿ ಮಗಳ ಸಂಬಂಧ ಗಟ್ಟಿಯಾಗಲಿದೆ ಎಂಬ ಹೊಸ ಭರವಸೆ ಮೂಡಿಸಿದ್ದಾರೆ. ತಾಯಿ, ಮಗಳು ಸೋಶಿಯಲ್ ಮೀಡಿಯಾದಲ್ಲಿ ಒಂದಾಗಿರುವುದನ್ನು ನೋಡಿ ನೆಟ್ಟಿಗರು ಸಂತಸವ್ಯಕ್ತ ಪಡಿಸಿದ್ದಾರೆ.