ನ್ಯೂಸ್

ಬಿಡಿಎ ಆಯುಕ್ತರಾಗಿ ಮಣಿವಣ್ಣನ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಎನ್. ಜಯರಾಮ್ ಶನಿವಾರ ಸೇವಾ ನಿವೃತ್ತಿಯಾಗಲಿದ್ದಾರೆ. ಆದರಿಂದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್‌ಗೆ ಬಿಡಿಎ ಆಯುಕ್ತ ಹುದ್ದೆಯನ್ನು ಸಮಪ್ರಭಾರ ಜವಾಬ್ದಾರಿವಹಿಸಿ ಸರ್ಕಾರ ಆದೇಶಿಸಿದೆ.

ಇದೇ ವೇಳೆ ತರಬೇತಿನಿತರ ಐಎಎಸ್ ಅಧಿಕಾರಿ ಪಿ.ಪಿ. ಅರ್ಚನಾ ಅವರನ್ನು ಕರ್ನಾಟಕ ಕೇಡರ್‌ನಿಂದ ಕೇರಳ ಕೇಡರ್‌ಗೆ ಮಾರ್ಪಡಿಸಿ ರಾಜ್ಯ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ.