ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಮಣಿಯಮ್ಮ ಅವರನ್ನು ಸದಸ್ಯರು ಅಭಿನಂದಿಸಿದರು. 
ನ್ಯೂಸ್

ವರೂರು ಗ್ರಾಪಂಗೆ ಅಧ್ಯಕ್ಷರಾಗಿ ಮಣಿಯಮ್ಮ ಆಯ್ಕೆ

ಹುಣಸೂರು: ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾದ ಮರೂರು ಗ್ರಾಮದ ಮಣಿಯಮ್ಮ ಅವಿರೋಧವಾಗಿ ಆಯ್ಕೆಯಾದರು.\

ಹಿಂದಿನ ಅಧ್ಯಕ್ಷರನ್ನು ಅವಿಶ್ವಾಸದಿಂದ ಪದಚ್ಯುತಿಗೊಳಿಸಲಾಗಿತ್ತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಸ್ಥಾನವಾಗಿದ್ದು, ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಹಾರಂಗಿಯ ಎಇಇ ಸಂತೋಷ್‌ಕುಮಾರ್ ಘೋಷಿಸಿದರು. ಒಟ್ಟು 16 ಸದಸ್ಯರ ಪೈಕಿ ನಾಲ್ವರು ಸದಸ್ಯರು ಗೈರು ಹಾಜರಾಗಿದ್ದರು. 12 ಸದಸ್ಯರು ಹಾಜರಿದ್ದರು.

ನೂತನ ಅಧ್ಯಕ್ಷೆ ಮಣಿಯಮ್ಮ ಮಾತನಾಡಿ, ಶಾಸಕ ಜಿ.ಡಿ.ಹರೀಶ್‌ಗೌಡ ಅವರ ಸಹಕಾರದಿದ ಗ್ರಾಮದ ಅಭಿವೃದ್ಧಿಗೆ ಎಲ್ಲ 12 ಸದಸ್ಯರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಹಾಗೂ ಗ್ರಾಮದ ಯಜಮಾನರು ಮುಖಂಡರಿಗೆ ತುಂಬು ಹೃದಯದ ಧನ್ಯವಾದಗಳು. ಪಂಚಾಯಿತಿ ಎಲ್ಲ 16 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನನ್ನ ಅವಧಿಯಲ್ಲಿ ಮೊದಲನೇ ಆದ್ಯತೆ ಸರ್ಕಾರಿ ಶಾಲೆಗಳಿಗೆ ಶೌಚಗೃಹ ನಿರ್ಮಿಸಿಕೊಡುವುದರ ಜತೆಗೆ ಶುದ್ಧ ಕುಡಿಯುವ ನೀರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಸುವುದು, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ಉಪಾಧ್ಯಕ್ಷೆ ಕಲಾವತಿ, ಸದಸ್ಯರಾದ ವತ್ಸಲ ಹರೀಶ್, ಸುಜಾತಾ ಸತೀಶ್, ಕುಚ್ಚೇಲೇಗೌಡ, ಸೂರನಾಯಕ, ಕುಮಾರಿ ಸೀನಯ್ಯ, ಜಾನಕಿ ರವಿ, ಫಾರೂಕ್ ಅಹಮದ್, ಸಣ್ಣ ಶೆಟ್ಟಿ, ಬೀರೇಗೌಡ, ಅಭಿ ಮಂಜು, ಮುಖಂಡರಾದ ರೈತ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಕಲ್ಲಹಳ್ಳಿ ಮಂಜು, ಹರೀಶ್ ಕಾವಲ್, ಪುಟ್ಟರಾಜು, ನಾಗೇಶ್, ಮಾಜಿ ಸತೀಶ್, ಚಾಮನಾಯಕ, ಭೋಗನಾಯಕ, ರವಿ, ಸ್ವಾಮಿನಾಯ್ಕ, ಸುರೇಶ್, ಸತೀಶ್ ಇದ್ದರು.