ಬಿರು ಬಿಸಿಲಿನ ನಡುವೆಯೂ ಮಂಗಳೂರು ತಾಪಂ ವ್ಯಾಪ್ತಿಯ ಮನೆಗಣತಿ ಶೇ.100 ಪೂರ್ಣಗೊಂಡಿದ್ದು, ದಾಖಲೆಯಲ್ಲಿದ್ದ ಪ್ರಮಾಣಕ್ಕಿಂತ ಹೆಚ್ಚುವರಿ ಮನೆಗಳನ್ನು ಗುರುತಿಸಲಾಗಿದೆ.
ಮಂಗಳೂರು: ಬಿರು ಬಿಸಿಲಿನ ನಡುವೆಯೂ ಮಂಗಳೂರು ತಾಪಂ ವ್ಯಾಪ್ತಿಯ ಮನೆಗಣತಿ ಶೇ.100 ಪೂರ್ಣಗೊಂಡಿದ್ದು, ದಾಖಲೆಯಲ್ಲಿದ್ದ ಪ್ರಮಾಣಕ್ಕಿಂತ ಹೆಚ್ಚುವರಿ ಮನೆಗಳನ್ನು ಗುರುತಿಸಲಾಗಿದೆ.
ಬರೋಬ್ಬರಿ 15 ವರ್ಷಗಳ ನಂತರ ಜನಗಣತಿ ಪ್ರಕ್ರಿಯೆ ನಡೆಯುತ್ತಿದ್ದು, ದೇಶಾದ್ಯಂತ ಏಕಕಾಲದಲ್ಲಿ ಗಣತಿಯ ಭಾಗವಾಗಿ ಏ.15ರವರೆಗೆ ಆನ್‌ಲೈನ್ ಮೂಲಕ ಸ್ವಯಂ ಗಣತಿ ನಡೆದಿತ್ತು. ಅದಾದ ಬಳಿಕ ಏ.16ರಿಂದ ಮೇ 15ರವರೆಗೆ ಮನೆಪಟ್ಟಿ ಹಾಗೂ ಮನೆಗಣತಿ ಮಾಡಬೇಕಿದೆ. ಮಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ತಾಪಂ ಗ್ರಾಮಾಂತರ ವ್ಯಾಪ್ತಿಯ 236 ಹೌಸ್ ಲಿಸ್ಟಿಂಗ್ ಬ್ಲಾಕ್ (ಎಚ್.ಎಲ್‌ಬಿ) ಗಳಲ್ಲಿ ಗಣತಿ ಪೂರ್ಣಗೊಂಡಿದ್ದು, ಶೇ.100ರಷ್ಟು ಗುರಿ ಸಾಧನೆ ಮಾಡಲಾಗಿದೆ. ಬಜಪೆ ವ್ಯಾಪ್ತಿಯ 53 ಹೌಸ್ ಲಿಸ್ಟಿಂಗ್ ಬ್ಲಾಕ್ (ಎಚ್.ಎಲ್‌ಬಿ) ಗಳಲ್ಲಿ ಗಣತಿ ಪೂರ್ಣಗೊಂಡಿದ್ದು, ಶೇ.100ರಷ್ಟು ಗುರಿ ಸಾಧನೆ ಮಾಡಲಾಗಿದೆ. ಆದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯೋಜಿತ ಗುರಿ ಇನ್ನೂ ತಲುಪದ್ದು, ನಗರ ವ್ಯಾಪ್ತಿಯಲ್ಲಿ ಮನೆಗಣತಿ ಕಾರ್ಯಕ್ಕೆ ತುಸು ಹಿನ್ನಡೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಜನಗಣತಿಗಾಗಿ 35 ಚಾರ್ಜ್ ಗಳನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ತಾಲೂಕುಗಳಲ್ಲಿ 23 ಚಾರ್ಜ್‌ಗಳಿದ್ದು ಮಹಾನಗರ ಪಾಲಿಕೆಯಲ್ಲಿ 12 ಚಾರ್ಜ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಚಾರ್ಜ್ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಗಣತಿದಾರರು ಸೇರಿದಂತೆ ಒಟ್ಟು 2392 ಸಿಬ್ಬಂದಿ ಗಣತಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 6 ಗಣತಿದಾರರಿಗೆ ಒಬ್ಬರಂತೆ 351
ಗಣತಿಯಲ್ಲಿ ಹೆಚ್ಚುವರಿ ಮನೆ ಪತ್ತೆ
ಸರ್ಕಾರಿ ದಾಖಲೆಯಯಂತೆ ತಾಪಂ ಗ್ರಾಮಾಂತರ ವ್ಯಾಪ್ತಿಯ 33273 ಮನೆ ಇತ್ತು. ಗಣತಿ ಪೂರ್ಣಗೊಂಡ ಬಳಿಕ ಈ ಸಂಖ್ಯೆ 33719 ಏರಿಕೆಯಾಗಿದೆ. ಬಜಪೆ ವ್ಯಾಪ್ತಿಯ 4437 ಮನೆ ಇತ್ತು. ಗಣತಿ ಪೂರ್ಣಗೊಂಡ ಬಳಿಕ ಈ ಸಂಖ್ಯೆ 5324ಕ್ಕೆ ಏರಿಕೆಯಾಗಿದೆ. ಗಣತಿಯಲ್ಲಿ ಹೆಚ್ಚುವರಿ ಮನೆ ಪತ್ತೆಯಾಗಿರುವುದು ಮಾತ್ರವಲ್ಲದೆ ಬಜಪೆ ವ್ಯಾಪ್ತಿಯಲ್ಲಿ ಜನಸಂಖ್ಯೆಯೂ ಹೆಚ್ಚಳ ಪತ್ತೆ ಹಚ್ಚಲಾಗಿದೆ. ದಾಖಲೆಯಂತೆ ಇಲ್ಲಿ 20681 ಜನಸಂಖ್ಯೆ ಇದ್ದು, ಗಣತಿ ವೇಳೆ 22924 ಜನಸಂಖ್ಯೆ ದಾಖಲಾಗಿದೆ. ಆದರೆ ತಾಪಂ ಗ್ರಾಮಾಂತರ ವ್ಯಾಪ್ತಿಯಯಲ್ಲಿ 239780 ಜನಸಂಖ್ಯೆ ಇದ್ದು, ಗಣತಿ ವೇಳೆ 144777 ಜನಸಂಖ್ಯೆ ಪತ್ತೆಯಾಗಿದೆ. ಗಣತಿ ವೇಳೆ ಮಂಗಳೂರು ತಾಪಂ ಗ್ರಾಮಾಂತರ ವ್ಯಾಪಿಯಲ್ಲಿ 510 ಮನೆ, ಬಜಪೆ ವ್ಯಾಪ್ತಿಯಲ್ಲಿ 86 ಮನೆ ಗಣತಿ ವೇಳೆ ಖಾಲಿ ಇತ್ತು.
6 ಲಕ್ಷ ದಾಟದ ಪಾಲಿಕೆ ಜನಸಂಖ್ಯೆ
2011ರಲ್ಲಿ ನಡೆದ ಜನಗಣತಿ ಪ್ರಕಾರ ಮಂಗಳೂರು ನಗರದಲ್ಲಿ 521799 ಲಕ್ಷ ಜನಸಂಖ್ಯೆ ಇತ್ತು. ಇದೀಗ 574905 ಲಕ್ಷ ಅಥವಾ ಅದನ್ನು ಮೀರಿ ಜನಸಂಖ್ಯೆ ಇರುವ ಸಾಧ್ಯತೆಯನ್ನು ನಗರಪಾಲಿಕ ಅಧಿಕಾರಿಗಳು ಅಂದಾಜಿಸಿದ್ದಾರೆ. ಪಾಲಿಕೆ ಅಧಿಕಾರಿಗಳ ಇತ್ತೀಚಿನ ಅಂದಾಜಿನಂತೆ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 6.5ಲಕ್ಷಕ್ಕೂ ಅಧಿಕ ಜನ ಸಂಖ್ಯೆಯನ್ನು ಅಂದಾಜಿಸಲಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ 875 ಹೌಸ್ ಲಿಸ್ಟಿಂಗ್ ಬ್ಲಾಕ್ (ಎಚ್.ಎಲ್‌ಬಿ) ಗಳಲ್ಲಿ 743 ಗಣತಿ ಪೂರ್ಣಗೊಂಡಿದ್ದು, ಶೇ.84.9ರಷ್ಟು ಗುರಿ ಸಾಧನೆ ಮಾಡಲಾಗಿದೆ. ಧಿಕಾರಿಗಳಿಂದ ಮುಂದಿನ 3 ದಿನದೊಳಗೆ 100 ಶೇ.ಗುರಿ ನಿರ್ದರಿಸಲಾಗಿದೆ. ಈಗಾಗಲೇ 148396 ಮನೆಗಳ ಪೈಕಿ 146514 ಗಣತಿ ಪೂರ್ಣಗೊಂಡಿದ್ದು, 574905 ಜನಸಂಖ್ಯೆಯ ಗಣತಿ ಕಾರ್ಯವೂ ಮುಗಿದಿದೆ. ಆದರೆ ಇಲ್ಲಿ ಗಣತಿ ವೇಳೆ 4688 ಮನೆ ಖಾಲಿ ಇತ್ತು.
ಮಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ತಾಪಂ ಗ್ರಾಮಾಂತರ ವ್ಯಾಪ್ತಿ, ಬಜಪೆ ವ್ಯಾಪ್ತಿಯಗಳಲ್ಲಿ ಗಣತಿ ಪೂರ್ಣಗೊಂಡಿದ್ದು, ಶೇ.100ರಷ್ಟು ಗುರಿ ಸಾಧನೆ ಮಾಡಲಾಗಿದೆ. ಆದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯೋಜಿತ ಗುರಿ ಇನ್ನೂ ತಲುಪದ್ದು, ಮುಂದಿನ 3 ದಿನದೊಳಗೆ ಶೇ.100 ಗುರಿ ತಲುಪಲಿದೆ.
-ಟಿ. ರಮೇಶ್ ಬಾಬು, ಮಂಗಳೂರು ತಹಸೀಲ್ದಾರ್