ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ವತಿಯಿಂದ ಮಂಗಳೂರು ಪುರಭವನದಲ್ಲಿ ಶನಿವಾರ ಆಯೋಜಿಸಿದ ‘ತುಳು ಜಾನಪದ ಉಚ್ಛಯ- 2024’ ಕಾರ್ಯಕ್ರಮದಲ್ಲಿ ‘ನಮ್ಮ ತುಳುನಾಡ್’ ಕಲಾ ಪಂಥದ ಉದ್ಘಾಟನೆಯನ್ನು ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಕುಡ್ಲ ಸ್ಥಾಪಕ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಉದ್ಘಾಟಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೀಕಿಂ ಸ್ಟಾೃನ್ಲಿ ಅಲ್ವಾರಿಸ್, ಶಾಸಕ ಡಿ.ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮುಂತಾದವರು ಉಪಸ್ಥಿತರಿದ್ದರು.
- ವಿಜಯವಾಣಿ ಸುದ್ದಿಜಾಲ ಮಂಗಳೂರು
- ದೇಶದ ಯಾವುದೇ ಕಡೆ ಜನರ ಹೋರಾಟ, ಪ್ರತಿಭಟನೆಯಿಂದ ಭಾಷೆ 8 ನೇ ಪರಿಚ್ಛೇದ ಸೇರ್ಪಡೆಗೊಂಡಿರುವ ಚರಿತ್ರೆ ಇಲ್ಲ. ಸಂಘಟಿತ ರಾಜಕೀಯ ಪ್ರಯತ್ನ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪೂರ್ಣ ಬೆಂಬಲದಿಂದ ಮಾತ್ರ ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವುದು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ ‘ತುಳು ಜಾನಪದ ಉಚ್ಛಯ- 2024’ ಕಾರ್ಯಕ್ರಮದಲ್ಲಿ ‘ನಮ್ಮ ತುಳುನಾಡ್’ ಕಲಾ ಪಂಥದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
- ತಮಿಳು ಭಾಷೆಗೆ ಮಾನ್ಯತೆ ದೊರೆಯಲು ತಮಿಳುನಾಡಿನಲ್ಲಿ ಯಾವುದೇ ಗಲಾಟೆ ಆಗಲಿಲ್ಲ. ಪಾರ್ಲಿಮೆಂಟ್‌ನಲ್ಲಿ ತಮಿಳುನಾಡಿನ ಎಲ್ಲ ಸಂಸದರು ಒಕ್ಕೊರಲ ಒತ್ತಾಯ ಮಾಡಿದರು. ಈ ವಿಷಯದಲ್ಲಿ ನಾಲ್ಕು ಸಂಸದರು ಬಾಷಣ ಮುಗಿಸಿ ಐದನೆಯವರು ಭಾಷಣ ಮಾಡುವ ವೇಳೆಗೆ ಅನುಮೋದನೆ ದೊರೆಯಿತು. ಒರಿಸ್ಸಾದಲ್ಲಿ ಒರಿಯಾ ಭಾಷೆಗೆ ಕೂಡ ಇದೇ ರೀತಿ ಮಾನ್ಯತೆ ದೊರೆಯಿತು. ಅಲ್ಲಿಯ ಎಲ್ಲ ಸಂಸದರು ಜತೆಯಾಗಿ ನಿಂತ ಕಾರಣ ಇದು ಸಾಧ್ಯವಾಯಿತು ಮತ್ತು ಇದು ದೇಶಕ್ಕೆ ಸ್ವಾತಂತ್ರೃ ದೊರೆತ ಕೂಡಲೇ ಸಾಧ್ಯವಾಯಿತು ಎಂದು ಅವರು ಉದಾಹರಣೆ ನೀಡಿದರು.
- ಜೀವಿಸುವ ಭಾಷೆ
- ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೀಕಿಂ ಸ್ಟಾೃನ್ಲಿ ಅಲ್ವಾರಿಸ್ ಅವರು ಮಾತನಾಡಿ, ನಾವು ಕೊಂಕಣಿಗರು. ಆದರೆ ನಾವು ಜೀವಿಸುವ ಭಾಷೆ ತುಳು. ಬೆಳಗ್ಗೆ ಮನೆಯಿಂದ ಹೊರಟು ರಾತ್ರಿ ಮನೆಗೆ ಮರಳುವ ತನಕ ನಮ್ಮ ಹೆಚ್ಚಿನ ವ್ಯವಹಾರಗಳು ತುಳುವಿನಲ್ಲಿಯೇ ನಡೆಯುತ್ತವೆ ಎಂದು ಹೇಳಿದರು.
- ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಕುಡ್ಲ ಸ್ಥಾಪಕ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಉದ್ಘಾಟಿಸಿದರು. ಶಾಸಕ ಡಿ.ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಎ.ಸಿ.ಭಂಡಾರಿ, ಗೌರವ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಮುಖಂಡರಾದ ಚಂದ್ರಹಾಸ ದೇವಾಡಿಗ, ಬಿ.ದಾಮೋದರ ನಿಸರ್ಗ, ರಾಜೇಶ್ವ ಆಳ್ವ ಬದಿಯಡ್ಕ, ದಿವಾಕರ ಶೆಟ್ಟಿ ಸಾಂಗ್ಲಿ, ಉದ್ಯಮಿ ನಗ್ರಿ ಗುತ್ತು ರೋಹಿತ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
- ತುಳು ಒಕ್ಕೂಟದ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
--------------
ತುಳುವೆರೆ ದಿಬ್ಬಣ, ತಮ್ಮನ ಬಲ್ಮನ
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಸಭೆಯ ಮೊದಲು ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಿಂದ ಪುರಭವನ ತನಕ ಆಕರ್ಷಕ ’ತುಳುವೆರೆ ದಿಬ್ಬಣ’ ನಡೆಯಿತು. ಜಾನಪನ ನಲಿಕೆ, ಡೋಲುದ ಸಬಿ ಸ್ವರ, ಕೀಲು ಕುದುರೆ ಗೊಂಬೆ ನಲಿಕೆ, ಸಿಂಗಾಋಇ ಚೆಂಡೆ ಮೇಳ, ಬ್ಯಾಂಡ್ ವಾಲಗ, ಮಹಿಳಾ ಚೆಂಡೆ ಬಳಗದ ಪ್ರದರ್ಶನ, ನಲಿಕೆ ಭಜನೆ ತುಳುವೆರೆ ದಿಬ್ಬಣದ ವಿಶೇಷತೆ.
ಸಂಜೆ ಪೆರ್ಮೆದ ತುಳುವೆ 2024- ತಮ್ಮನ ಬಲ್ಮನ ಸನ್ಮಾನ ಸಮಾರಂಭ ನಡೆಯಿತು.