Deepavali Firecrackers : ಉರ್ಫಿ ಜಾವೇದ್ ಚಿತ್ರವಾದ ಬಟ್ಟೆಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಜಾವೇದ್ ಅವರ ಅಸಾಧಾರಣ ಫ್ಯಾಷನ್ ಸೆನ್ಸ್‌ಗೆ ಸ್ಪರ್ಧಿಸಲು ಮಾರುಕಟ್ಟೆಯಲ್ಲಿ ಹೊಸ ಹುಡುಗನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಈತನ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿರುವ ಯುವಕ ಉರ್ಫಿಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಇದರಲ್ಲಿ ಯುವಕ ದೀಪಾವಳಿಯ ದಿನ ಸಿಡಿಸುವ ಪಟಾಕಿಯಿಂದ ಆಭರಣಗಳನ್ನು ಮಾಡಿ ಧರಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವೀಡಿಯೊದಲ್ಲಿ, ಯುವಕನೊಬ್ಬ ಹೊಳೆಯುವ ಲೆಹೆಂಗಾ-ಚೋಲಿಯನ್ನು ಧರಿಸಿದ್ದಾನೆ. ಪಟಾಕಿಯ ಮಾಲೆ, ಮಣಿಗಳಿಂದ ಮಾಡಿದ ಕಿವಿಯೋಲೆ, ಬಾಂಬುಗಳ ಹಾರ ಮುಂತಾದ ಆಭರಣಗಳನ್ನು ಮಾಡಿ ಧರಿಸಿದ್ದಾನೆ. ಯುವಕ ತನ್ನ ಕೈಯಲ್ಲಿ ಬೆಳಗಿದ ದೀಪವನ್ನು ಸಹ ಹಿಡಿದು ಡಾನ್ಸ್ ಮಾಡಿದ್ದಾನೆ.
ಇಂತಹ ಡ್ರೆಸ್ ತೊಟ್ಟರೆ ಅನಾಹುತ ಆಗೋದು ಪಕ್ಕಾ...ಸ್ವಲ್ಪ ಎಚ್ಚರ ತಪ್ಪಿದರೂ ಗಂಭೀರ ಅಪಾಯಕ್ಕೆ ಸಿಲುಕುವ ಸಂಭವವಿದೆ. ಪಟಾಕಿಯ ಬಳಿ ಉರಿಯುವ ದೀಪವನ್ನು ಒಯ್ಯುವುದು ಅಪಾಯಕಾರಿ ನಿರ್ಧಾರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವಕನನ್ನು ಕಂಟೆಂಟ್ ಕ್ರಿಯೇಟರ್ ರವಿಸಾಗರ್ ಎಂದು ಗುರುತಿಸಲಾಗಿದೆ. ಏಳು ದಿನಗಳ ಹಿಂದೆ @ravisagar88 ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಇದುವರೆಗೆ 35 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ತಮಾಷೆಯ ಕಾಮೆಂಟ್‌ಗಳೊಂದಿಗೆ ಕಾಮೆಂಟ್ ಮಾಡುತ್ತಿದ್ದಾರೆ.