ನವದೆಹಲಿ: ಮನುಷ್ಯರು ವಾಕಿಂಗ್ಗೆ ಹೋಗುವುದು ಸಾಮಾನ್ಯ. ಕೆಲವರು ನಾಯಿಯನ್ನೂ ವಾಕಿಂಗ್ಗೆ ಕರೆದೊಯ್ಯುತ್ತಾರೆ. ಆದರೆ ಸ್ಪೇನ್ನ ಒಬ್ಬಾತ ಲಾಕ್ಡೌನ್ ಅವಧಿಯಲ್ಲಿ ಮೀನನ್ನು ವಾಕಿಂಗ್ ಕರೆದೊಯ್ಯುತ್ತಿದ್ದ. ಹೀಗಾಗಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ.
ಲಾಕ್ಡೌನ್ ವೇಳೆ ಜನ ಮನೆಯಿಂದ ಹೊರಬರದಂತೆ ಉತ್ತರ ಸ್ಪೇನ್ನಲ್ಲಿ ಡಂಗುರ ಸಾರಿದ ನಂತರವೂ ಒಬ್ಬಾತ ಗಾಜಿನ ಬೌಲ್ನಲ್ಲಿ ಮೀನೊಂದನ್ನು ಹಾಕಿಕೊಂಡು ವಾಕಿಂಗ್ಗೆ ಹೋಗುತ್ತಿದ್ದ. ಹೀಗಾಗಿ ಅ ವ್ಯಕ್ತಿಯನ್ನು ಸ್ಪೇನ್ ಪೊಲೀಸರು ಬಂಧಿಸಿದ್ದು, ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.