ನ್ಯೂಸ್

ವಿಮಾನದಲ್ಲಿ ಸಹ ಪ್ರಯಾಣಿಕ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ | Plane

ಬಾಬುಪ್ರಸಾದ್​ ಮೋಡಿಸ್​

ದೆಹಲಿ: ದೆಹಲಿಯಿಂದ ಬ್ಯಾಂಕಕ್​ಗೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ(Plane) ವ್ಯಕ್ತಿಯೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಬುಧವಾರ ನಡೆದಿದೆ.

ಈ ಘಟನೆಯಲ್ಲಿ 2D ಯಲ್ಲಿ ಕುಳಿತಿದ್ದ ತುಷಾರ್ ಮಸಂದ್ ಎಂಬ ವ್ಯಕ್ತಿ, 1D ಯಲ್ಲಿ ಕುಳಿತಿದ್ದ ಸಹಪ್ರಯಾಣಿಕ ಬ್ರಿಡ್ಜ್‌ಸ್ಟೋನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಿರೋಷಿ ಯೋಶಿಜಾನೆ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಏರ್​ ಇಂಡಿಯಾ ವಿಮಾನ ಸಂಸ್ಥೆಯು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಕ್ಕೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಮದ್ಯಪಾನ ಮಾಡಿದ್ದನು ಎಂದು ಏರ್​ ಇಂಡಿಯಾ ವಿಮಾನ ಸಿಬ್ಬಂದಿ ತಿಳಿಸಿದ್ದು, ಘಟನೆ ಕುರಿತು ತನಿಖೆ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)