ನವದೆಹಲಿ: ವ್ಯಕ್ತಿಯೊಬ್ಬ 1990 ರಲ್ಲಿ 1 ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದು, 35 ವರ್ಷಗಳ ನಂತರ ಅದರ ಬೆಲೆ 80 ಕೋಟಿ ರೂ. ಅಗಿದೆ. ಮಕ್ಕಳ ಭವಿಷ್ಯಕ್ಕಾಗಿ ಸುವರ್ಣ ಮಾರ್ಗವನ್ನು ರೂಪಿಸಲು ತಂದೆ ಮಾಡಿದ ಪ್ರಯತ್ನವು ಇಂದು ಅವರ ಕುಟುಂಬಕ್ಕೆ ಕೋಟಿಗಟ್ಟಲೆ ಹಣವನ್ನು ತಂದಿದೆ. ಅದೃಷ್ಟ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ.
1990 ರಲ್ಲಿ, ಜಿಂದಾಲ್ ಕಂಪನಿಯ ವ್ಯಕ್ತಿಯೊಬ್ಬರು 1 ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು. ಆ ಸಮಯದಲ್ಲಿ, ಅದನ್ನು ಸಾಮಾನ್ಯ ಹೂಡಿಕೆ ಎಂದು ಪರಿಗಣಿಸಲಾಗಿತ್ತು, ಆದರೆ ಅವರು ವರ್ಷಗಳ ಕಾಲ ಷೇರುಗಳನ್ನು ಹೊರತೆಗೆಯದೆ ಇಟ್ಟುಕೊಂಡಿದ್ದರು. ಅನಿರೀಕ್ಷಿತವಾಗಿ, ಅವರ ಮಗ ಇತ್ತೀಚೆಗೆ ಷೇರು ಪ್ರಮಾಣಪತ್ರಗಳನ್ನು ನೋಡಿ ಅವುಗಳ ಮೌಲ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಿದನು. ಆ ಷೇರುಗಳ ಪ್ರಸ್ತುತ ಮೌಲ್ಯವನ್ನು ತಿಳಿದು ಮಗನಿಗೆ ಸಂತೋಷವಾಯಿತ್ತು.
ಆ ಸಮಯದಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ. ಈಗ 80 ಕೋಟಿ ರೂ. ತಲುಪಿದೆ. ಸೌರವ್ ದತ್ತ ಎಂಬ ವ್ಯಕ್ತಿ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಷಯ ವೈರಲ್ ಆಗಿದೆ. ನೆಟಿಜನ್‌ಗಳು ಇದನ್ನು ಹೊಗಳುತ್ತಿದ್ದಾರೆ,
'ಇದು ದೀರ್ಘಾವಧಿಯ ಹೂಡಿಕೆಯಂತೆ ಕೆಲಸ ಮಾಡುತ್ತದೆ. ಕಾಲಾನಂತರದಲ್ಲಿ ಮೌಲ್ಯ ಹೆಚ್ಚಾಗುವುದು ಸಹಜ.' ಇದು ಕೇವಲ ಅದೃಷ್ಟವಲ್ಲ, ಹೂಡಿಕೆಗಳ ತಿಳುವಳಿಕೆ, ತಾಳ್ಮೆ ಮತ್ತು ಭವಿಷ್ಯಕ್ಕಾಗಿ ಉತ್ತಮ ಯೋಜನೆಯನ್ನು ಸಹ ಸೂಚಿಸುತ್ತದೆ. ಹೂಡಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಕಾಲಾನಂತರದಲ್ಲಿ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡುವುದರಿಂದ ಎಷ್ಟು ಲಾಭ ಪಡೆಯಬಹುದು ಎಂಬುದನ್ನು ಈ ಘಟನೆ ತೋರಿಸುತ್ತದೆ.