ಕುಂಟಾಲ್​ ಬ್ಯಾನರ್ಜಿ ಮತ್ತು ಅವಿನಭಾ ಚಕ್ರವರ್ತಿ 
ನ್ಯೂಸ್

ಪತ್ನಿ ಹುಡುಕಿಕೊಡಿ! ಛತ್ತೀಸ್​ಗಢದಿಂದ ಸಂತ್ರಸ್ತ ಪತಿ ಟ್ವೀಟ್​, ಬೆಂಗಳೂರು ಪೊಲೀಸರ ಪ್ರತಿಕ್ರಿಯೆ ಹೀಗಿದೆ…

ಬೆಂಗಳೂರು: ತನ್ನ ಪತ್ನಿಯನ್ನು ಅಪಹರಿಸಿದ್ದಾರೆ. ಆಕೆಯನ್ನು ಹುಡುಕಿಕೊಡಿ ಎಂದು ಸಂತ್ರಸ್ತ ಪತಿರಾಯನೊಬ್ಬ ಟ್ವೀಟ್​ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿ ಮನವಿ ಮಾಡಿದ್ದಾರೆ.

ಟ್ವೀಟ್​ನಲ್ಲಿ ಅಪಹರಿಸಿದವನ ಫೋಟೋ ಕೂಡ ಪೋಸ್ಟ್​ ಮಾಡಿದ್ದಾನೆ. ಆತನ ಹೆಸರು ಅವಿನಭಾ ಚಕ್ರವರ್ತಿ. ಈತ ಪತ್ನಿಯನ್ನು ಬಲವಂತವಾಗಿ ಅಪಹರಿಸಿದ್ದಾನೆ. ಆಕೆಯನ್ನು ರಕ್ಷಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ.

ಸಂತ್ರಸ್ತನ ಹೆಸರು ಕುಂಟಾಲ್​ ಬ್ಯಾನರ್ಜಿ. ಈತ ಛತ್ತೀಸ್​ಗಢದಿಂದ ಟ್ವೀಟ್​ ಮಾಡಿದ್ದಾನೆ. ಆತನ ಪತ್ನಿ ಬೆಂಗಳೂರು ನಗರದಲ್ಲಿದ್ದು, ಆಕೆಯನ್ನು ರಕ್ಷಣೆ ಮಾಡುವಂತೆ ಬೆಂಗಳೂರು ಪೊಲೀಸರ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಮಾಡಿದ್ದಾನೆ.

ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಮೊದಲು ದೂರು ನೀಡುವಂತೆ ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)