ನ್ಯೂಸ್

VIDEO: ಈತ ಪೆಟ್ರೋಲ್ ಬಂಕ್​ಗೆ ಹೋಗಿ ಬಾಟಲಿಯಲ್ಲಿ ಪೆಟ್ರೋಲ್​ ಕೊಡುವಂತೆ ಕೇಳಿದ; ಕೆಲಸಗಾರರು ಒಪ್ಪದೆ ಇದ್ದಿದ್ದಕ್ಕೆ ಮಾಡಬಾರದ್ದು ಮಾಡಿ ಅರೆಸ್ಟ್ ಆದ...

ಮೊರಾದಾಬಾದ್​: ಇಲ್ಲೊಬ್ಬ ಸೀದಾ ಪೆಟ್ರೋಲ್​ ಬಂಕ್​ಗೆ ಹೋಗಿ ಬಾಟಲಿಯಲ್ಲಿ ಪೆಟ್ರೋಲ್​ ತುಂಬಿಕೊಡಿ ಎಂದು ಗಂಟು ಬಿದ್ದ. ಆದರೆ ಆ ಬಂಕ್​ನ ಉದ್ಯೋಗಿ ಅದಕ್ಕೆ ಒಪ್ಪಲಿಲ್ಲ. ವಾಹನಕ್ಕೆ ಹಾಕಿಕೊಡುತ್ತೇವೆ, ಬಾಟಲಿಯಲ್ಲಿ ಕೊಡುವುದಿಲ್ಲ ಎಂದರು. ಅಷ್ಟಕ್ಕೇ ಸಿಟ್ಟಿಗೆದ್ದ ಈ ಭೂಪ ಮಾಡಬಾರದ್ದನ್ನು ಮಾಡಿ ಈಗ ಬಂಧಿತನಾಗಿದ್ದಾನೆ.

ಉತ್ತರ ಪ್ರದೇಶದ ಮೊರಾಬಾದ್​ನಲ್ಲಿ ಶುಕ್ರವಾರ ಘಟನೆ ನಡೆದಿದೆ. ಬೈಕ್​ನಲ್ಲಿ ಹೋದ ವ್ಯಕ್ತಿ ಬಾಟಲಿಯಲ್ಲೂ ಹೆಚ್ಚುವರಿ ಪೆಟ್ರೋಲ್​ ನೀಡುವಂತೆ ಕೇಳಿದ್ದಾನೆ. ಆದರೆ ಬಂಕ್​ನಲ್ಲಿ ಕೆಲಸ ಮಾಡುವವರು ಇದಕ್ಕೆ ಒಪ್ಪಲಿಲ್ಲ. ಆಗ ಸಿಟ್ಟಾದ ವ್ಯಕ್ತಿ ತಾನು ಮತ್ತೊಂದು ಪೆಟ್ರೋಲ್​ ಬಂಕ್​ನಿಂದ ಬಾಟಲಿಯಲ್ಲಿ ತುಂಬಿಸಿಕೊಂಡು ತಂದಿದ್ದ ಪೆಟ್ರೋಲ್​ನ್ನು ಅಲ್ಲಿನ ಕೆಲಸಗಾರನ ಮೇಲೆ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.

ಆಗ ಅಲ್ಲಿಯೇ ಇದ್ದ ಇನ್ನೊಬ್ಬಾತ ಪೆಟ್ರೋಲ್​ ಪಂಪ್​ನಿಂದಲೇ ವ್ಯಕ್ತಿಗೆ ಹೊಡೆದಿದ್ದಾನೆ. ಹೀಗೆ ಕ್ಷಣ ಕಾಲ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೊಲೆ ಪ್ರಯತ್ನ ಆರೋಪದಡಿ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಸ್​ಪಿ ಅಮಿತ್​ ಕುಮಾರ್​ ಆನಂದ್​ ತಿಳಿಸಿದ್ದಾರೆ.