ನ್ಯೂಸ್

ರೈಲಿನಡಿ ಕುಳಿತುಕೊಂಡು 290 ಕಿ.ಮೀ ಪ್ರಯಾಣಿಸಿದ ವ್ಯಕ್ತಿ!; ವಿಡಿಯೋ ವೈರಲ್​

ಮಧ್ಯಪ್ರದೇಶ: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ರೈಲಿನ ಬೋಗಿಯ (ಕೆಳಗಡೆ ಅಪಾಯಕಾರಿ) ಚಕ್ರಗಳ ನಡುವೆ(ಟ್ರಾಲಿ) ಮಲಗಿಕೊಂಡು ಬರೊಬ್ಬರಿ 290 ಕಿ.ಮೀ ದೂರ ಪ್ರಯಾಣಿಸಿದ ಅಘತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಇಟಾರ್ಸಿಯಿಂದ ಎಂಬ ಪ್ರದೇಶದಿಂದ ಬಂದಿದ್ದ ರೈಲು ಜಬಲ್​ಪುರದಲ್ಲಿ​ ನಿಲ್ಲಿಸಿದಾಗ, ಕ್ಯಾರೇಜ್​​ ಮತ್ತು ವ್ಯಾಗನ್​(C&W) ಸಿಬ್ಬಂದಿ ರೈಲಿನ ರೋಲಿಂಗ್​(ಚಕ್ರಗಳ ತಪಾಸಣೆ ) ನಡೆಸುವಾಗ ಈ ಘಟನೆ ಗುರುವಾರ  ಬೆಳಕಿಗೆ ಬಂದಿದೆ.

ಈ ವ್ಯಕ್ತಿಯು ಕೋಚ್​ ಕೆಳಗಿನ ಟ್ರಾಲಿಯಲ್ಲಿ ಮಲಗಿರುವುದು ಸಿಬ್ಬಂದಿಗೆ ಆಚ್ಚರಿ ತರಿಸಿದೆ. ಅಲ್ಲದೇ, ಆ ವ್ಯಕ್ತಿಯನ್ನು ಟ್ರಾಲಿಯಿಂದ ಹೊರ ತರುತ್ತಿರುವ ವಿಡಿಯೋಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ(ಆರ್​ಪಿಎಫ್​) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯ ಹೆಸರು ಬಹಿರಂಗಪಡಿಸಿಲ್ಲ. ಇಟಾರ್ಸಿಯಲ್ಲಿ ರೈಲು ಬೋಗಿಯ ಟ್ರಾಲಿಯಲ್ಲಿ ಹತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ತಾನು ಮದ್ಯವೆಸನಿಯಾಗಿದ್ದು, ಕುಡಿದು ಟ್ರೈಮ್​ ಹತ್ತಿದ್ದೇನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ಮಾಹಿತಿನಯನ್ನು ಕಲೆ ಹಾಕುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.

ಇನ್ನೂ ರೈಲಿನ ಟ್ರಾಲಿಯಿಂದ ಹೊರ ಬರುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್​ ಆಗಿದ್ದು, ಈ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಅಜಾಗರೂಕ ಕೃತ್ಯಗಳಿಂದ ಪ್ರಯಾಣಿಕರಿಗೆ ಮತ್ತು ರೈಲ್ವೆ ಸಿಬ್ಬಂದಿಗೆ ಇಬ್ಬರಿಗೂ ಅಪಾಯ ಹೆಚ್ಚು ಎಂದಿದ್ದಾರೆ,(ಏಜೆನ್ಸೀಸ್​).