ನ್ಯೂಸ್

ವ್ಯಕ್ತಿಯ ತಲೆ ಬೋಳಿಸಿ, ಮೂತ್ರ ಕುಡಿಸಿದ ಕಿಡಿಗೇಡಿಗಳು? ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!

ಮಧ್ಯಪ್ರದೇಶ: ವಿವಾಹಿತ ಮಹಿಳೆಯೊಂದಿಗೆ ಓಡಿಹೋಗಿದ್ದ ಎಂದು ಆರೋಪಿಸಿ ವ್ಯಕ್ತಿಗೆ ಮೂತ್ರ ಕುಡಿಸಿ ಮತ್ತು ಪಾದರಕ್ಷೆಗಳ ಹಾರ ಹಾಕಿ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ವ್ಯಕ್ತಿಯನ್ನು ಅವಮಾನಿಸಿ ಮತ್ತು ದೈಹಿಕವಾಗಿ ಹಲ್ಲೆ ಮಾಡುತ್ತಿರು ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಪಾದರಕ್ಷೆಗಳ ಮಾಲೆಯನ್ನು ಹಾಕಿ ಮತ್ತು ಬಲವಂತದಿಂದ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸುತ್ತಿರುವ ದೃಶ್ಯ ಸೆರೆಯಾಗಿದೆ. ಸ್ಥಳದಲ್ಲಿದ್ದ ಕೆಲವರು ಬಲವಂತವಾಗಿ ಮೂತ್ರ ಸೇವಿಸುವಂತೆ ಕಿರುಚಾಡಿದ್ದಾರೆ. ವ್ಯಕ್ತಿಯನ್ನು ಮಹಿಳೆಯೊಬ್ಬರು ಥಳಿಸುತ್ತಿರುವ ದೃಶ್ಯವು ಸೆರೆಯಾಗಿದೆ.

ಮತ್ತೊಂದು ವಿಡಿಯೋದಲ್ಲಿ ವ್ಯಕ್ತಿಗೆ ಅರ್ಧ ಮೀಸೆ ಮತ್ತು ತಲೆಯನ್ನು ಬೋಳಿಸಲಾಗಿದ್ದು, ತನ್ನ ಕೈಯಲ್ಲಿ ಹಿಡಿದಿದ್ದ ಶೋ ಅನ್ನು ನೆಕ್ಕುವಂತೆ ಹಾಗೂ ಮತ್ತೊಂದು ಶೂ ಅನ್ನು ತಲೆಯ ಮೇಲೆ ಇಟ್ಟುಕೊಳ್ಳುಂತೆ ಒತ್ತಾಯ ಮಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಭಾರ್ಗವ ಅವರು ಮೂರು-ನಾಲ್ಕು ದಿನಗಳ ಹಿಂದಿನ ವೀಡಿಯೊ ಕ್ಲಿಪ್‌ಗಳನ್ನು ಗಮನಿಸಿದ್ದೇವೆ. ಹಲ್ಲೆಗೊಳಗಾದ ಸಂತ್ರಸ್ತೆಯನ್ನು ಸಂಪರ್ಕಿಸಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಭಿಲ್ಖೇಡಿ ಗ್ರಾಮದ ಬಂಜಾರ ಸಮುದಾಯದ ವ್ಯಕ್ತಿಯೊಬ್ಬ ವಿವಾಹವಾಗಿರುವ ಮಹಿಳೆಯೊಂದಿಗೆ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಭಿಲ್ಖೇಡಿ ಗ್ರಾಮದ ಬಂಜಾರ ಸಮುದಾಯದ ವ್ಯಕ್ತಿಯೊಬ್ಬ ವಿವಾಹವಾಗಿರುವ ಮಹಿಳೆಯೊಂದಿಗೆ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಘಟನೆ ಕುರಿತ ವಿಡಿಯೋ ನೋಡಿ ಸಂತ್ರಸ್ತೆಯನ್ನು ಸಂಪರ್ಕಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಭಾರ್ಗವ ತಿಳಿಸಿದ್ದಾರೆ.