ನ್ಯೂಸ್

ತಂದೆ ವಾಚ್‌ಮ್ಯಾನ್ ಆಗಿ ಕೆಲಸ ಮಾಡ್ತಿದ್ದ  5 ಸ್ಟಾರ್​ ಹೋಟೆಲ್​​ಗೆ ಅತಿಥಿಯಾಗಿ ಕರೆದುಕೊಂಡು ಹೋದ ಮಗ

ನವದೆಹಲಿ:  ಒಬ್ಬ ವ್ಯಕ್ತಿ ಎಷ್ಟೇ ವಯಸ್ಸಾದರೂ ತನ್ನ ಹೆತ್ತವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಪಾಲಕರು ನಮಗಾಗಿ ಬಹಳಷ್ಟು ಮಾಡುತ್ತಾರೆ. ಅದಕ್ಕೆ ಬೆಲೆ ಕಟ್ಟಲಾಗದು. ತಂದೆ-ತಾಯಿಗೆ ತಮ್ಮ ಕಾಲ ಮೇಲೆ ತಾವೇ ನಿಲ್ಲುವಷ್ಟು ಗಟ್ಟಿಮುಟ್ಟಾದಾಗ ಅವರಿಗೆ ತಕ್ಕ ಸಂತೋಷವನ್ನು ನೀಡುವುದು ಮಕ್ಕಳ ಜವಾಬ್ದಾರಿಯಾಗಿದೆ.

1995 ರಿಂದ 2000 ರವರೆಗೆ ನವದೆಹಲಿಯ ಐಟಿಸಿಯಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡಿದ ತನ್ನ ತಂದೆಯನ್ನು ಇತ್ತೀಚೆಗೆ ವ್ಯಕ್ತಿಯೊಬ್ಬರು 25 ವರ್ಷಗಳ ನಂತರ ಅದೇ ಸ್ಥಳಕ್ಕೆ ವಿಶೇಷ ಭೋಜನಕ್ಕೆ ಕರೆದೊಯ್ದರು. ಇದೀಗ ಆ ಒಂದು ಪೋಸ್ಟ್ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಮಗ ತನ್ನ ತಂದೆಯನ್ನು ದೆಹಲಿಯ ಅದೇ 5-ಸ್ಟಾರ್ ಹೋಟೆಲ್‌ಗೆ ಕರೆದೊಯ್ದನು. ಇವನ ತಂದೆ 25 ವರ್ಷಗಳ ಹಿಂದೆ ಅಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಈಗ ಅವರ ಕನಸು ನನಸಾಗಿದೆಯಂತೆ. ಪಾಲಕರು ತಮ್ಮ ಮಗುವನ್ನು ಸಮರ್ಥವಾಗಿಸಲು ತಮ್ಮ ಜೀವನದುದ್ದಕ್ಕೂ ಶ್ರಮಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಮಗನೂ ಇವರನ್ನು ಯಶಸ್ಸಿನ ಹಾದಿಯಲ್ಲಿ ನೋಡುತ್ತಿದ್ದರೆ... ತಂದೆ-ತಾಯಿಗೆ ಅದಕ್ಕಿಂತ ಖುಷಿ ಬೇರೇನೂ ಇಲ್ಲ.

ಹೊಸದಿಲ್ಲಿಯ ಐಟಿಸಿ ಹೊಟೇಲ್ ನಲ್ಲಿನ ಟೇಬಲ್ ನಲ್ಲಿ ಪೋಷಕರೊಂದಿಗೆ ಊಟ ಮಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. 1995 ರಿಂದ 2000 ರವರೆಗೆ ಈ ಹೋಟೆಲ್‌ನ ಹೊರಗೆ ತನ್ನ ತಂದೆ ವಾಚ್‌ಮ್ಯಾನ್ ಆಗಿದ್ದರು. ಸರಿಯಾಗಿ 25 ವರ್ಷಗಳ ನಂತರ ತಂದೆಯನ್ನು ಅದೇ ಹೋಟೆಲ್‌ಗೆ ಊಟಕ್ಕೆ ಕರೆದುಕೊಂಡು ಹೋಗುವ ಅವಕಾಶ ಸಿಕ್ಕಿತು.

5 ಸ್ಟಾರ್ ಹೋಟೆಲ್ ನಲ್ಲಿ ಭೋಜನ:

ಆರ್ಯನ್ ಮಿಶ್ರಾ ಅವರು ಎಕ್ಸ್‌ನಲ್ಲಿ ಭಾವನಾತ್ಮಕ ಕ್ಷಣವನ್ನು ಹಂಚಿಕೊಳ್ಳುವ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಅನ್ನು ಓದಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಅನ್ನು 48 ಸಾವಿರ ಬಳಕೆದಾರರು ಲೈಕ್ ಮಾಡಿದ್ದಾರೆ. ನಾನು ದೇವರನ್ನು ನೋಡಲಿಲ್ಲ, ಆದರೆ ನಾನು ನನ್ನ ಹೆತ್ತವರನ್ನು ನೋಡಿದೆ ಎಂದು ಕಾಮೆಂಟ್‌ಗಳಲ್ಲಿ ಹೇಳಲಾಗಿದೆ.