ನ್ಯೂಸ್

ಡೈರಿ ಚುನಾವಣೆ ತಪ್ಪಿಸಲು ಅಧಿಕಾರಿಗಳನ್ನು ಬೆದರಿಸಿ ಬ್ಯಾಲೆಟ್ ಕದ್ದ ವ್ಯಕ್ತಿ

ರಾಮನಗರ: ಎಂಪಿಸಿಎಸ್ ಚುನಾವಣೆ ತಡೆಯುವ ಸಲುವಾಗಿ ಚುನಾವಾಣಧಿಕಾರಿಗಳನ್ನು ಬೆದರಿಸಿ ಬ್ಯಾಲೆಟ್ ಪೇಪರ್ ಮತ್ತು ಲ್ಯಾಪ್ ಟಾಪ್ ದೋಚಿರುವ ಘಟನೆ ಮಾಗಡಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದ ಡೈರಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗಧಿ ಆಗಿತ್ತು. ಆದರೆ ಇದನ್ನು ತಡೆಯುವ ಸಲುವಾಗಿಯೇ ಹೊಸಪಾಳ್ಯದ ಬಳಿ‌ ಚುನಾವಣಾಧಿಕಾರಿ ಉಮೇಶ್ ಹಾಗೂ ಉಷಾ ಅವರಿದ್ದ ಕಾರನ್ನು ಗ್ರಾಪಂ ಮಾಜಿ ಸದಸ್ಯನೂ ಆದ ಬಲರಾಮ್ ಎಂಬಾತ ಮಾರಕಾಸ್ತ್ರಗಳಿಂದ ಬೆದರಿಸಿದ್ದಾನೆ.‌

ಬ್ಯಾಲೆಟ್ ಪೇಪರ್ ಹಾಗೂ ಲ್ಯಾಪ್ ಟಾಪ್ ಕಸಿದು ಕೊಂಡು ಪರಾರಿ ಆಗಲು ಮುಂದಾಗಿದ್ದಾನೆ. ಇವರನ್ನು ತಡೆಯಲು ಬಂದ ಚುನಾವಣಾಧಿಕಾರಿ ಉಷಾ ಅವರಿಗೆ ಕಾರಿನಿಂದ ಗುದ್ದಿ ಪರಾರಿ ಆಗಿದ್ದು ಈ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ‌ ಸೆರೆ ಹಿಡಿದಿದ್ದಾರೆ.

ಡೈರಿ ಚುನಾವಣೆಗೆ ಕುದೂರು ಪೊಲೀಸರು‌ ಕಾವಲು ಹಾಕಿದ್ದು, ಮತ್ತೊಮ್ಮೆ ಬ್ಯಾಲೆಟ್ ಮುದ್ರಿಸಿ ಚುನಾವಣೆ ನಡೆಸಲು ಮುಂದಾಗಿದ್ದಾರೆ.

ಇಡೀ ಘಟನೆ ಆತಂಕಕ್ಕೆ ಕಾರಣವಾಗಿದೆ.