ನ್ಯೂಸ್

ಪ್ರಿಯಕರನೊಂದಿಗೆ ಬೆತ್ತಲಾಗಿದ್ದ ಪತ್ನಿಯ ವಿಡಿಯೋ ಲೀಕ್​; ಪತಿ ಮಾಡಿದ್ದೇನು ನೋಡಿ..!

ಥಾಣೆ: ಪ್ರಿಯಕರನೊಂದಿಗೆ ಬೆತ್ತಲೆಯಾಗಿದ್ದ ಪತ್ನಿಯ ವಿಡಿಯೋ ನೋಡಿದ ಪತಿ, ಆಕೆಯನ್ನು ಕೊಂದು ನಂತರ ಶರಣಾದ ಘಟನೆ ಭಿವಂಡಿಯಲ್ಲಿ ನಡೆದಿದೆ.

ರಫೀಕ್​ ಮೊಹಮದ್​ ಯುನುಸ್​(50) ಆರೋಪಿ. ಯುನುಸ್​ ತನ್ನ ಪತ್ನಿ ನಸ್ರೀನ್​ ಹಾಗೂ ಮೂವರು ಮಕ್ಕಳೊಂದಿಗೆ ಭಿವಂಡಿಯಲ್ಲಿ ವಾಸವಾಗಿದ್ದರು. ಆದರೆ ಲಾಕ್​ಡೌನ್​ ಬಂದಮೇಲೆ ಯುನುಸ್​ ಕೆಲಸ ಹೋಗಿತ್ತು. ಆಗ ನಸ್ರೀನ್ ತನ್ನ ಮೂವರು ಮಕ್ಕಳೊಂದಿಗೆ ನಾಗಾನ್​​ನಲ್ಲಿರುವ ಸೋದರಿಯ ಮನೆಗೆ ಹೋಗಿದ್ದರು.

ಆದರೆ ಇತ್ತೀಚೆಗೆ ನಸ್ರೀನ್​ ತನ್ನ ಪ್ರಿಯಕರ ಸದ್ದಾಂನೊಂದಿಗೆ ಬೆತ್ತಲೆಯಾಗಿ ಇದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನು ನೋಡಿ ಕೆಂಡಾಮಂಡಲನಾದ ಯುನುಸ್​ ಸೀದಾ ನಸ್ರೀನ್​ ಇದ್ದ ಸೋದರಿಯ ಮನೆಗೆ ಹೋಗಿ, ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.

ಪತ್ನಿಯ ಕತ್ತುಕೊಯ್ದ ಯುನುಸ್​ ಪರಾರಿಯಾಗದೆ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ. ನನ್ನ ಪತ್ನಿ ಇನ್ನೊಬ್ಬನೊಂದಿಗೆ ಬೆತ್ತಲೆಯಾದ ವಿಡಿಯೋ ನೋಡಿ ತೀವ್ರ ನಾಚಿಕೆಯಾಯಿತು. ಇದು ನಮ್ಮ ಮನೆತನದ ಮರ್ಯಾದಿ ಪ್ರಶ್ನೆ ಎಂದು ಆರೋಪಿ ಹೇಳಿದ್ದಾರೆ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)